ಕುಂಭಮೇಳಕ್ಕೆ ಹೋಗುವಾಗಲೇ ಗೆಳತಿ ಹತ್ಯೆ; ವಿಚಾರಣೆ ವೇಳೆ ಶಾಕಿಂಗ್‌ ಸತ್ಯ ಬಯಲು

ಮಹಾಕುಂಭ 2025ಕ್ಕೆ ಹೋಗುತ್ತಿದ್ದ ಜಾರ್ಖಂಡ್ ವ್ಯಕ್ತಿಯೊಬ್ಬ ದಾರಿ ಮಧ್ಯೆಯೇ ತನ್ನ ಗೆಳತಿಯನ್ನು ಕೊಲೆ ಮಾಡಿದ್ದಾನೆ. ಮೊದಲು ಗೆಳತಿಯನ್ನು ಉಸಿರುಗಟ್ಟಿಸಿ, ನಂತರ ಚಾಕುವಿನಿಂದ ಆಕೆಯ ಗಂಟಲನ್ನು ಸೀಳಿ ಭೀಕರವಾಗಿ ಕೊಲೆ ಮಾಡಿದ್ದಾನೆ. ಆಶ್ಚರ್ಯಕರ ಸಂಗತಿಯೆಂದರೆ, ಈ ಘಟನೆಯ ನಂತರ, ಆ ವ್ಯಕ್ತಿ ಕುಂಭಕ್ಕೆ ಹೋಗಿ ಸ್ನಾನ ಮಾಡಿ ಮನೆಗೆ ಮರಳಿದ್ದಾನೆ.

ಫೆಬ್ರವರಿ 5, 2025 ರಂದು,‌ ಲೋರ್ದಾಗ ಜಿಲ್ಲೆಯ ಘಾಘ್ರಾದ ನಿವಾಸಿ ಸೋನು ಕುಮಾರ್ ತನ್ನ ಗೆಳತಿ ಅನುರಿಕಾ ಕುಮಾರಿಯನ್ನು ಬೈಕ್‌ನಲ್ಲಿ ಮಹಾ ಕುಂಭಕ್ಕೆ ಕರೆದೊಯ್ಯುತ್ತಿದ್ದ. ದೇಹ್ರಿಯಲ್ಲಿ ಹುಡುಗಿಗೆ ವಾಶ್‌ರೂಮ್‌ಗೆ ಹೋಗಬೇಕಿತ್ತು, ಆಗ ಪ್ರೇಮಿ ಬೈಕ್ ಅನ್ನು ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿ ಗೆಳತಿಯನ್ನು ರಸ್ತೆಯ ಬದಿಯ ಪೊದೆಗಳಿಗೆ ಕರೆದೊಯ್ದ ನಂತರ, ಅವನು ತನ್ನ ಗೆಳತಿಯನ್ನು ಆಕೆಯ ದುಪಟ್ಟಾದಿಂದ ಉಸಿರುಗಟ್ಟಿಸಿ, ನಂತರ ಚಾಕುವಿನಿಂದ ಆಕೆಯ ಗಂಟಲನ್ನು ಸೀಳಿದ್ದಾನೆ. ನಂತರ ಮಹಾ ಕುಂಭಕ್ಕೆ ತಲುಪಿ ಸ್ನಾನ ಮಾಡಿ ಮನೆಗೆ ಹಿಂದಿರುಗಿದನು.

ತಮ್ಮ ಮಗಳು ಹಿಂತಿರುಗದಿದ್ದಾಗ, ಅನುರಿಕಾ ತಾಯಿ ಬಿಶುನ್‌ಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ತಮ್ಮ ಮಗಳು ಅನುರಿಕಾ, ಸೋನು ಜೊತೆ ಕುಂಭಕ್ಕೆ ಹೋಗಿದ್ದಾಳೆ, ಆದರೆ ಇನ್ನೂ ಹಿಂತಿರುಗಿಲ್ಲ ಎಂದು ಹೇಳಿದ್ದರು. ವಿಷಯ ಪೊಲೀಸರನ್ನು ತಲುಪಿದ ತಕ್ಷಣ, ಸೋನುನನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆ ತರಲಾಗಿದ್ದು, ಅಲ್ಲಿ ವಿಚಾರಣೆಯ ಸಮಯದಲ್ಲಿ ಅವನ ಸುಳ್ಳುಗಳು ಬಯಲಾಗಲು ಪ್ರಾರಂಭವಾದವು.

ಇದರ ನಂತರ, ಪೊಲೀಸರು ಕಠಿಣವಾಗಿ ವಿಚಾರಿಸಲು ಪ್ರಾರಂಭಿಸಿದಾಗ, ಆರೋಪಿ ಸೋನು ಸತ್ಯವನ್ನು ಬಾಯ್ಬಿಟ್ಟನು. ಮಾಹಿತಿಯನ್ನು ಪಡೆದ ಬಿಹಾರ ಪೊಲೀಸರು ಬಿಶುನ್‌ಪುರಕ್ಕೆ ತಲುಪಿ ಆರೋಪಿಯನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದಾರೆ.

ಅನುರಿಕಾ ಮತ್ತು ಸೋನು ಕುಮಾರ್ ಎರಡು ವರ್ಷಗಳಿಂದ ಪ್ರೀತಿಯಲ್ಲಿದ್ದರು ಎಂದು ಬಿಶುನ್‌ಪುರ ಪೊಲೀಸ್ ಠಾಣೆಯ ಉಸ್ತುವಾರಿ ರಾಕೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಅನುರಿಕಾ, ಸೋನು ಅವರನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಳು. ಸೋನು ಮದುವೆಯಾಗಲು ಬಯಸುತ್ತಿರಲಿಲ್ಲ. ಹೀಗಾಗಿ ಹುಡುಗಿ ಗುಮ್ಲಾ ಮಹಿಳಾ ಪೊಲೀಸ್ ಠಾಣೆ ಮತ್ತು ಬಿಶುನ್‌ಪುರ ಪೊಲೀಸ್ ಠಾಣೆಗೆ ಲಿಖಿತ ಮಾಹಿತಿ ನೀಡಿದ್ದಳು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read