ತನ್ನ ಮದುವೆಯಲ್ಲಿ ಧರಿಸಿದ್ದ ಉಡುಪಿನ ಕಾರಣಕ್ಕೆ ಟ್ರೋಲ್ ಗೊಳಗಾದ ಅಮೀರ್ ಖಾನ್ ಅಳಿಯ…!

ಬಾಲಿವುಡ್ ನಟ ಅಮೀರ್ ಖಾನ್ ಅವರ ಮಗಳು ಇರಾಖಾನ್ ರನ್ನು ಮದುವೆಯಾದ ಫಿಟ್ ನೆಸ್ ತರಬೇತುದಾರ ನೂಪುರ್ ಶಿಖರೆ ತಮ್ಮ ಮದುವೆ ಸಮಯದಲ್ಲಿ ಧರಿಸಿದ್ದ ಬಟ್ಟೆ ವಿಚಾರಕ್ಕೆ ಟ್ರೋಲ್ ಆಗ್ತಿದ್ದಾರೆ. ಡಿಸೆಂಬರ್ 3 ರಂದು ಮುಂಬೈನಲ್ಲಿ ಪುಣೆ ಮೂಲದ ಫಿಟ್ ನೆಸ್ ತರಬೇತುದಾರ ನೂಪುರ್ ಶಿಖರೆ ಅವರೊಂದಿಗೆ ಅಮೀರ್ ಖಾನ್ ಮಗಳು ಇರಾ ಖಾನ್ ಮದುವೆ ನಡೆದಿತ್ತು.

ಸೆಲೆಬ್ರಿಟಿಗಳಂತೆ ಹೆಚ್ಚು ಆಡಂಬರವಿಲ್ಲದೇ ಸರಳ ಮತ್ತು ಸಂಭ್ರಮದಿಂದ ನಡೆದ ಈ ಮದುವೆ ಹಲವು ಕಾರಣಗಳಿಗೆ ಗಮನ ಸೆಳೆದಿತ್ತು. ಮೊದಲು ಮದುವೆಯನ್ನು ನೋಂದಣಿ ಮಾಡಿಸಿದ್ದು ಆನಂತರ ಸಾಂಪ್ರದಾಯಿಕ ವಿಹಾಹ ನೆರವೇರಿಸಲಾಗಿತ್ತು. ಮದುವೆ ನೋಂದಾವಣೆ ಸಮಯದಲ್ಲಿ ನೂಪುರ್ ಶಿಖರೆ ಜಾಗಿಂಗ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದು ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮುಂದುವರೆಯಲು ಕಾರಣವಾಗಿದೆ.

ನೂಪುರ್ ಬನಿಯನ್ ಮತ್ತು ಶಾರ್ಟ್ಸ್ ಧರಿಸಿ ಸ್ನೇಹಿತರೊಂದಿಗೆ ಜಾಗಿಂಗ್ ಮಾಡುತ್ತಾ ಮದುವೆ ಸ್ಥಳಕ್ಕೆ ಬಂದಿದ್ದರು. ಯಾರೊಬ್ಬರೂ ಮದುವೆಗೆ ಈ ರೀತಿ ಬರುವುದಿಲ್ಲ ಆದರೆ ನೂಪುರ್ ಆಡಂಬರದ ವಸ್ತ್ರವಿಲ್ಲದೇ ಬನಿಯನ್ ನಲ್ಲಿ ಬಂದಿದ್ದು ಅವರನ್ನು ‘ವೈಫ್ ಬೀಟರ್’ ಎಂದು ಟ್ರೋಲ್ ಮಾಡಲಾಗ್ತಿದೆ. ವೈಫ್ ಬೀಟರ್ ಎಂಬುದು 1800 ರಲ್ಲಿ ಶರ್ಟ್ ನ ಒಳಗಡೆ ಹಾಕುವ ಬನಿಯನ್ ಆಗಿ ಹೆಚ್ಚು ಗುರುತಿಸಿಕೊಂಡಿತ್ತು. 1900 ರಲ್ಲಿ ಅಥ್ಲೀಟ್ಸ್ ಇದನ್ನು ಹೆಚ್ಚು ಆರಾಮದಾಯಕ ಎಂದು ಧರಿಸುತ್ತಿದ್ದರಿಂದ ಎಲ್ಲರ ಉತ್ತಮ ಆಯ್ಕೆಯಾಗಿತ್ತು.

ಇದರೊಂದಿಗೆ ನೂಪುರ್ ರನ್ನು ನೆಟ್ಟಿಗರು, ವರ ಬಟ್ಟೆಯನ್ನೂ ಬದಲಿಸದೇ ನೇರವಾಗಿ ಜಿಮ್ ನಿಂದ ಮದುವೆಯಾಗಲು ಬಂದಿದ್ದಾರೆ ಎಂದು ಗೇಲಿ ಮಾಡಿದ್ದಾರೆ. ಕೆಲವರು ಶೇರ್ವಾನಿಯ ಹಣ ಉಳಿದಿದೆ ಎಂದು ಟ್ರೋಲ್ ಮಾಡಿದ್ದಾರೆ. ಕೆಲ ನೆಟ್ಟಿಗರು ಅವರ ಸರಳ ವಸ್ತ್ರವನ್ನೂ ಮೆಚ್ಚಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read