ನಾಳೆ ಬಿಡುಗಡೆಯಾಗಲಿದೆ ‘ಮತ್ಸ್ಯಗಂಧ’ ಚಿತ್ರದ ವಿಡಿಯೋ ಹಾಡು

ಉತ್ತರ ಕನ್ನಡ ಜಿಲ್ಲೆಯ ಮೀನುಗಾರರ ಬದುಕಿನ ಕುರಿತ ‘ಮತ್ಸ್ಯಗಂಧ’ ಸಿನಿಮಾ ಈಗಾಗಲೇ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದು, ಫೆಬ್ರವರಿ 23ಕ್ಕೆ ತೆರೆ ಮೇಲೆ ಬರಲು ಸಜ್ಜಾಗಿದೆ. ‘ಮತ್ಸ್ಯಗಂಧ’ ಚಿತ್ರದ ”ಕಡಲ ಒಡಲ” ಎಂಬ ವಿಡಿಯೋ ಹಾಡು ನಾಳೆ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ.

ಈ ಚಿತ್ರದಲ್ಲಿ ಪೃಥ್ವಿ ಅಂಬಾರ್ ನಾಯಕನಟನಾಗಿ ಅಭಿನಯಿಸಿದ್ದು, ಭಜರಂಗಿ ಲೋಕಿ, ಶರತ್ ಲೋಹಿತಾಶ್ವ, ಕಿರಣ್ ನಾಯಕ್, ಅಶೋಕ್ ಹೆಗಡೆ, ಸತೀಶ್ ಚಂದ್ರ, ದಿಶಾ ಶೆಟ್ಟಿ, ಅಂಜಲಿ ಪಾಂಡೆ, ಪ್ರತಿಮಾ ನಾಯಕ್, ನಿರೀಕ್ಷಾ ಶೆಟ್ಟಿ, ಗೌತಮ್, ಗಣೇಶ್, ಪ್ರಭಾಕರ್ ಕಲ್ಯಾಣಿ, ದೀಪ ಶ್ರೀನಿವಾಸ್, ಶಿಲ್ಪ ಆಚಾರ್ಯ, ದಿವ್ಯ ಶೆಟ್ಟಿ, ಕಾಂತರಾಜ್ ಕಡ್ಡಿಪುಡಿ, ರೋಹನ್ ಲೋಕೇಶ್, ಗಜಾನನ ಹೆಗಡೆ, ಸೇರಿದಂತೆ ಹಲವರ ತಾರಾ ಬಳಗವಿದೆ.

ಸಹ್ಯಾದ್ರಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ವಿಶ್ವನಾಥ್ ನಿರ್ಮಾಣ ಮಾಡಿದ್ದು, ಪ್ರಶಾಂತ್ ಸಿದ್ದಿ ಸಂಗೀತ, ಶ್ರೀನಿವಾಸ್ ಸಂಕಲನ, ಪ್ರವೀಣ್ ಎಂ ಪ್ರಭು ಛಾಯಾಗ್ರಹಣವಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read