‘ವಾಕ್ಸಿನ್ ವಾರ್’ ವೀಕ್ಷಿಸುವವರಿಗೆ ಬಂಪರ್ ಆಫರ್; Buy 1 Get 1 ಫ್ರೀ ಟಿಕೆಟ್….!

The Vaccine War': Vivek Agnihotri announces 'buy 1 get 1' ticket after ' Jawan' - India Today

ಬಾಕ್ಸ್ ಅಫೀಸ್ ನಲ್ಲಿ ಸಖತ್ ಸದ್ದು ಮಾಡುತ್ತಿರುವ ಚಿತ್ರ ‘ವಾಕ್ಸಿನ್ ವಾರ್’ ನಿರ್ದೇಶಕರು‌, ಸಿನಿ ಪ್ರೇಕ್ಷಕರಿಗೆ ಭರ್ಜರಿ ಆಫರ್ ಕೊಟ್ಟಿದ್ದಾರೆ.

ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ವಾಕ್ಸಿನ್ ವಾರ್ ಚಿತ್ರ ನೋಡುವವರಿಗೆ ಒಂದು ಟಿಕೆಟ್ ತೆಗೆದುಕೊಂಡರೆ ಮತ್ತೊಂದು ಫ್ರೀ ಎಂಬ ಅಚ್ಚರಿಯ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಘೋಷಿಸಿರುವ ‘ವಾಕ್ಸಿನ್ ವಾರ್’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸಿನಿಮಾಗೆ ಪ್ರೇಕ್ಷಕರನ್ನು ಸೆಳೆಯಲು Buy 1 Get 1 ಫ್ರೀ ಟಿಕೆಟ್ ಆಫರ್ ನೀಡಿದ್ದಾರೆ.

ಇಂದು ಭಾನುವಾರ ಮತ್ತು ನಾಳೆ ಗಾಂಧಿಜಯಂತಿ ರಜೆ ಹಿನ್ನೆಲೆಯಲ್ಲಿ ಈ ಆಫರ್ ನೀಡಿದ್ದು ಬುಕ್ ಮೈ ಶೋನಲ್ಲಿ ಟಿಕೆಟ್ ಬುಕ್ ಮಾಡುವವರಿಗೆ ಈ ಭರ್ಜರಿ ಆಫರ್ ಸಿಗಲಿದೆ.

ಈಗಾಗಲೇ ವಾಕ್ಸಿನ್ ವಾರ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ 3.25 ಕೋಟಿ ಗಳಿಸುವಲ್ಲಿ ಯಶಸ್ವಿಯಾಗಿದೆ. ‘ದಿ ಕಾಶ್ಮೀರ್ ಫೈಲ್ಸ್’ ನಂತರ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ನಿರ್ದೇಶನದ ವಾಕ್ಸಿನ್ ವಾರ್ ಚಿತ್ರದಲ್ಲಿ ನಾನಾ ಪಾಟೇಕರ್, ಅನುಪಮ್ ಖೇರ್, ನಿವೇದಿತಾ ಭಟ್ಟಾಚಾರ್ಯ ಸೇರಿದಂತೆ ಪ್ರಮುಖರು ನಟಿಸಿದ್ದಾರೆ. ಸಿನಿಮಾಗೆ ಈ ರೀತಿ Buy 1 Get 1 ಫ್ರೀ ಟಿಕೆಟ್ ಆಫರ್ ನೀಡಿರೋದು ಇದೇ ಮೊದಲಲ್ಲ.

ಇದಕ್ಕೂ ಮುನ್ನ ಶಾರುಖ್ ಖಾನ್ ನಟನೆಯ ಅಟ್ಲೀ ನಿರ್ದೇಶನದ ಜವಾನ್ ಚಿತ್ರ ಈ ರೀತಿಯ Buy 1 Get 1 ಟಿಕೆಟ್ ಫ್ರೀ ಆಫರ್ ನೀಡಿತ್ತು. ಚಿತ್ರವು ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 1,000 ಕೋಟಿ ರೂಪಾಯಿಗಳನ್ನು ದಾಟಿದ ನಂತರ ಶಾರುಖ್ ಖಾನ್ ಇದೇ ರೀತಿಯ ಆಫರ್ ಅನ್ನು ಘೋಷಿಸಿದ್ದರು.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ನ (ಐಸಿಎಂಆರ್) ಮಾಜಿ ಮಹಾನಿರ್ದೇಶಕ ಬಲರಾಮ್ ಭಾರ್ಗವ ಅವರ ‘ಗೋಯಿಂಗ್ ವೈರಲ್: ಮೇಕಿಂಗ್ ಆಫ್ ಕೋವಾಕ್ಸಿನ್’ ಕಾದಂಬರಿ ಆಧಾರಿತ ವಾಕ್ಸಿನ್ ವಾರ್ ಚಲನಚಿತ್ರವು ಸೆಪ್ಟೆಂಬರ್ 28 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read