ಟ್ರೆಂಡ್ ಆಗ್ತಿದೆ ‘ದರ್ಶನ್ ಖೈದಿ ನಂಬರ್ 6106’ : ಮೊಬೈಲ್, ವಾಹನದ ಮೇಲೂ ರಾರಾಜಿಸಿದ ಸ್ಟಿಕ್ಕರ್..!

ಬೆಂಗಳೂರು : ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ ಗೆ ನೀಡಿರುವ ಕೈದಿ ನಂಬರ್ 6106 ಸಖತ್ ಟ್ರೆಂಡಿಂಗ್ ನಲ್ಲಿದೆ. ಎಲ್ಲಾ ಮೊಬೈಲ್ ಹಾಗೂ ವಾಹನಗಳಲ್ಲಿ ಈ ನಂಬರ್ ಗಳು ಇರುವ ಸ್ಟಿಕ್ಕರ್ ರಾರಾಜಿಸುತ್ತಿದೆ.

ವಾಹನದ ನಂಬರ್ ಪ್ಲೇಟ್, ವಾಹನದ ಮುಂಭಾಗ, ಬೈಕ್ ನಲ್ಲಿ 6106 ಸ್ಟಿಕ್ಕರ್ ರಾರಾಜಿಸುತ್ತಿದೆ. ಅಲ್ಲದೇ ಈ ಮೊಬೈಲ್ ಬ್ಯಾಕ್ ಕವರ್ ನಲ್ಲೂ 6106 ಸ್ಟಿಕ್ಕರ್ ಗಮನ ಸೆಳೆಯುತ್ತಿದೆ.

ಹಾಗೂ, ದರ್ಶನ್ ಕೇಸ್ಗೆ ಸಂಬಂಧಿಸಿದ ವಿಷಯಗಳನ್ನೇ ಇಟ್ಟುಕೊಂಡು ಸಿನಿಮಾ ಟೈಟಲ್ ನೋಂದಣಿ ಮಾಡಿಸಲು ಕೆಲವರು ಆಸಕ್ತಿ ತೋರಿಸುತ್ತಿದ್ದಾರೆ. ನೀಡಿರುವ ಕೈದಿ ನಂಬರ್ 6106 ಟೈಟಲ್ ಇಟ್ಟುಕೊಂಡು ಹಲವರು ಸಿನಿಮಾ ಮಾಡಲು ಮುಂದಾಗಿದ್ದು, ವಾಣಿಜ್ಯ ಮಂಡಳಿ ಇನ್ನೂ ಯಾವುದಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಪರ ಹಲವರು ಬ್ಯಾಟ್ ಬೀಸಿದ್ದಾರೆ. ದರ್ಶನ್ ಕೆಲ ಅಭಿಮಾನಿಗಳು ನಮ್ಮ ಬಾಸ್ ನ್ನು ಎಂದಿಗೂ ಬಿಟ್ಟುಕೊಡುವ ಮಾತೇ ಇಲ್ಲ, ಎಂದಿಗೂ ಅವರು ನಮ್ಮ ಬಾಸ್ ಎಂದು ಹೇಳುವ ಮೂಲಕ ಅಭಿಮಾನ ಮೆರೆಯುತ್ತಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read