WATCH : ಬಹು ನಿರೀಕ್ಷಿತ ಕನ್ನಡದ ‘ಕೆಂಡ’ ಚಿತ್ರದ ಟ್ರೇಲರ್ ರಿಲೀಸ್..!

ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ‘ಕೆಂಡ’ ಚಿತ್ರದ ಟ್ರೇಲರ್ ರಿಲೀಸ್ ಆಗಿ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಈ ಹಿಂದೆ ‘ಗಂಟುಮೂಟೆ’ ಚಿತ್ರ ನೀಡಿದ ಚಿತ್ರತಂಡ ಕೆಂಡ ಚಿತ್ರವನ್ನು ತೆರೆ ಮೇಲೆ ತರುತ್ತಿದೆ.

ಸಹದೇವ್ ಕೆಲವಡಿ ಈ ಸಿನಿಮಾವನ್ನು ನಿರ್ಮಿಸಿದ್ದು, ರೂಪಾ ರಾವ್ ಚಿತ್ರ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಜು.26ರಂದು ತೆರೆಗೆ ಬರಲಿದೆ.

ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುವ ಯುವಕನೊಬ್ಬ ಹೇಗೆ ಭೂಗತ ಲೋಕಕ್ಕೆ ಕಾಲಿಡುತ್ತಾನೆ. ಯಾವೆಲ್ಲಾ ತೊಳಲಾಟದಲ್ಲಿ ನಾಯಕ ಸಿಕ್ಕಿಹಾಕಿಕೊಳ್ಳುತ್ತಾನೆ ಎಂಬುದೇ ಸಿನಿಮಾದ ಕಥೆ.ಈ ಸಿನಿಮಾವನ್ನು ಅಮೇಯುಕ್ತಿ ಸ್ಟುಡಿಯೋಸ್ ಬ್ಯಾನರಿನಡಿಯಲ್ಲಿ ರೂಪಾ ರಾವ್ ನಿರ್ಮಾಣ ಮಾಡಿದ್ದಾರೆ.ಈ ಚಿತ್ರದಲ್ಲಿ ಬಿ.ವಿ ಭರತ್, ಪ್ರಣವ್ ಶ್ರೀಧರ್, ವಿನೋದ್ ಸುಶೀಲ, ಗೋಪಾಲಕೃಷ್ಣ ದೇಶಪಾಂಡೆ, ಸಚಿನ್ ಶ್ರೀನಾಥ್, ಬಿಂದು ರಕ್ಷಿದಿ ಮುಂತಾದವರ ತಾರಾಗಣವಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read