ನಾಳೆ ರಿಲೀಸ್ ಆಗಲಿದೆ ವಿಜಯ ರಾಘವೇಂದ್ರ ಅಭಿನಯದ ‘ಕೊಂಡಾಣ’ ಚಿತ್ರದ ಟ್ರೈಲರ್

ದೇವಿ ಪ್ರಸಾದ್ ಶೆಟ್ಟಿ ನಿರ್ದೇಶನದ ವಿಜಯ ರಾಘವೇಂದ್ರ ಅಭಿನಯದ ಬಹು ನಿರೀಕ್ಷಿತ ಕೊಂಡಾಣ ಚಿತ್ರದ ಟ್ರೈಲರ್ ಇದೇ ಜನವರಿ 12ರಂದು ಬಿಡುಗಡೆಯಾಗುತ್ತಿದೆ. ಈ ಕುರಿತು ವಿಜಯ ರಾಘವೇಂದ್ರ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ  ಹಂಚಿಕೊಂಡಿದ್ದಾರೆ.

ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ವಿಜಯ ರಾಘವೇಂದ್ರ ಸೇರಿದಂತೆ ಭಾವನಾ ಮೆನನ್ ಮತ್ತು ಖುಷಿ ರವಿ ಪ್ರಮುಖ ಪಾತ್ರದಲ್ಲಿದ್ದಾರೆ. ಸಾತ್ವಿಕ್ ಹೆಬ್ಬಾರ್ ಹಾಗೂ ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಗಗನ್ ಸಂಗೀತ ಸಂಯೋಜನೆ ನೀಡಿದ್ದಾರೆ. ಶಶಾಂಕ್ ನಾರಾಯಣ ಅವರ ಸಂಕಲನವಿದ್ದು, ವಿಶ್ವಜಿತ್ ರಾವ್ ಛಾಯಾಗ್ರಹಣವಿದೆ.

ಜನವರಿ 26ರಂದು ಈ ಸಿನಿಮಾ ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read