ಗಿರೀಶ್ ಜಿ ನಟಿಸಿ ನಿರ್ದೇಶಿಸಿರುವ ‘ಶಾಲಿವಾಹನ ಶಕೆ’ ಚಿತ್ರದ ಟ್ರೈಲರ್ ಇದೆ ಸೆಪ್ಟೆಂಬರ್ ಮೂರಕ್ಕೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದೆ.
ಈ ಚಿತ್ರವನ್ನು SWC ಸೈಡ್ವಿಂಗ್ ಸಿನಿಮಾಸ್ ಬ್ಯಾನರ್ ನಲ್ಲಿ ಶೈಲೇಶ್ ಕುಮಾರ್ ಎಂಎಂ ನಿರ್ಮಾಣ ಮಾಡಿದ್ದು ಗಿರೀಶ್ ಜಿ ಹಾಗೂ ಸುಪ್ರೀತಾ ಸತ್ಯನಾರಾಯಣ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಕಾರ್ತಿಕ್ ಭೂಪತಿ ಮತ್ತು ಹರಿ ಅಜಯ್ ಸಂಗೀತ ಸಂಯೋಜನೆ ನೀಡಿದ್ದು, ಉಜ್ವಲ್ ಚಂದ್ರ ಸಂಕಲನ, ಪುರುಷೋತ್ತಮ್ ವೇಷಭೂಷಣ, ಪ್ರಶಾಂತ್ ವೈಎನ್ ಮತ್ತು ಅಭಿನಂದನ್ ದೇಶಪ್ರಿಯ ಅವರ ಸಂಭಾಷಣೆ, ಅರುಣ್ ಸುರೇಶ್ ಛಾಯಾಗ್ರಹಣವಿದೆ.