ಎಂಸಿ ಚನ್ನಕೇಶವ ನಿರ್ದೇಶನದ ನಿಶಾ ರವಿಕೃಷ್ಣನ್ ಅಭಿನಯದ ‘ಅಂಶು’ ಚಿತ್ರದ ಟ್ರೈಲರ್ ಇದೆ ಸೆಪ್ಟೆಂಬರ್ 12ರಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಎಸ್ ಟಿ ಜೋಸೆಫ್ ಯೂನಿವರ್ಸಿಟಿ ಯಲ್ಲಿ ಟ್ರೈಲರ್ ಲಾಂಚ್ ಇವೆಂಟ್ ಕಾರ್ಯಕ್ರಮವಿದ್ದು, ಹಲವಾರು ಅತಿಥಿಗಳು ಆಗಮಿಸಲಿದ್ದಾರೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ.
ಮಹಿಳಾ ಪ್ರಧಾನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಗ್ರಹಣ lip ಸಂಸ್ಥೆ ನಿರ್ಮಾಣ ಮಾಡಿದ್ದು, c.ಬಾಲ ಸಾರಂಗನ್ ಸಂಗೀತ ಸಂಯೋಜನೆ ನೀಡಿದ್ದಾರೆ. ಎಂಸಿ ಚನ್ನಕೇಶವ ಹಾಗೂ ರಿಕ್ಕಿ ಮಾರ್ಟಿನ್ ಅವರ ಸಂಕಲನ, ಮಹೇಂದ್ರ ಗೌಡ ಸಂಭಾಷಣೆ, ಅದಿತಿ ನಾರಾಯಣ್ ನೃತ್ಯ ನಿರ್ದೇಶನ, ಸುನಿಲ್ ನರಸಿಂಹಮೂರ್ತಿ ಛಾಯಾಗ್ರಹಣವಿದೆ.