ಸುರೇಶ್ ರಾಜು ನಿರ್ದೇಶನದ ಅನ್ವೇಶ್ ಅಭಿನಯದ ಬಹು ನಿರೀಕ್ಷಿತ ‘ಸ್ವೇಚ್ಛಾ’ ಚಿತ್ರದ ಟೈಟಲ್ ಟ್ರ್ಯಾಕ್ ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದೆ.
ಈ ಚಿತ್ರದಲ್ಲಿ ಅನ್ವಿಶ್ ಹಾಗೂ ಪವಿತ್ರ ನಾಯಕ್ ಪ್ರಮುಖ ಪಾತ್ರದಲ್ಲಿದ್ದು, ಸ್ಪಂದನ, ಬೇಬಿ ಶ್ರೀ, ಕೆ ಆರ್ ಮುರಾರಿ ರೆಡ್ಡಿ, ಪ್ರಕಾಶ್, ರೇವಣ್ಣ, ಮಾಲಾಶ್ರೀ, ವಿನಯ್ ದೇವರಾಜ್ ಉಳಿದ ತಾರಾಂಗಣದಲ್ಲಿದ್ದಾರೆ. ಸ್ಟಾರ್ ಮಸ್ತ್ ವಿಕ್ಟರಿ ಆರ್ಟ್ಸ್ ಬ್ಯಾನರ್ ನಲ್ಲಿ ಸ್ಟಾರ್ ಮಸ್ತಾನ್ ನಿರ್ಮಾಣ ಮಾಡಿದ್ದು, ಪವನ್ ಬಿ.ಕೆ. ಸಂಕಲನ, ಸುರೇಶ್ ರಾಜು ನೃತ್ಯ ನಿರ್ದೇಶನ, ಸುರೇಶ್ ರೆಡ್ಡಿ ಸಂಭಾಷಣೆ, ಹಾಗೂ ಸತೀಶ್ ಛಾಯಾಗ್ರಹಣವಿದೆ. ಲೋಕಿ ತವಸ್ಯ ಸಂಗೀತ ಸಂಯೋಜನೆ ನೀಡಿದ್ದಾರೆ.