ತನ್ನ ವಿಭಿನ್ನ ಶೀರ್ಷಿಕೆಯಿಂದಲೇ ಭರ್ಜರಿ ಸೌಂಡ್ ಮಾಡಿರುವ ರಿಶ್ ಹಿರೇಮಠ್ ನಟಿಸಿ ನಿರ್ದೇಶಿಸಿರುವ ‘ಬರ್ಗೆಟ್ ಬಸ್ಯಾ’ ಚಿತ್ರದ ಟೀಸರ್ ನಾಳೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗುತ್ತಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದೆ.
ಈ ಚಿತ್ರವನ್ನು ನಾಗಾರ್ಜುನ ರೆಡ್ಡಿ ನಿರ್ಮಾಣ ಮಾಡಿದ್ದು, ಮಲ್ಲಿಕಾರ್ಜುನ ಕೆ, ಆನಂದ್ ಶೆಟ್ಟಿ, ರಾಖಿರಾಜ್ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ರಿಶ್ ಹಿರೇಮಠ್ ಸೇರಿದಂತೆ ಅನುಷಾ ಗೌಡ, ವೈಷ್ಣವಿ ಸತ್ಯ ನಾರಾಯಣ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿದ್ದಾರ್ಥ್ ಕಾಮತ್ ಸಂಗೀತ ಸಂಯೋಜನೆ ನೀಡಿದ್ದು, ಸಿದ್ದು ದಳವಾಯಿ ಸಂಕಲನ ಹಾಗೂ ಶಾಮ್ ಸಾಲ್ವಿನ್ ಛಾಯಾಗ್ರಹಣವಿದೆ.