ಎನ್ ವಿನಾಯಕ ಕಥೆ ಬರೆದು ನಿರ್ದೇಶಿಸಿರುವ ಫುಲ್ ಮೀಲ್ಸ್ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು ತನ್ನ ಶೀರ್ಷಿಕೆಯಿಂದಲೇ ಎಲ್ಲರ ಗಮನ ಸೆಳೆದಿದೆ. ಸ್ಯಾಂಡಲ್ ನ ಬ್ಯೂಟಿಫುಲ್ ನಟಿ ತೇಜಸ್ವಿನಿ ಶರ್ಮ ಕೂಡ ನಾಯಕಿಯಾಗಿ ಅಭಿನಯಿಸಿದ್ದು ನಲ್ಲಿ ಅಭಿನಯಿಸಿದ್ದು ಇಂದು ಚಿತ್ರತಂಡ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡುವ ಮೂಲಕ ಹುಟ್ಟು ಹಬ್ಬದ ಶುಭಾಶಯಗಳು ತಿಳಿಸಿದೆ.
ಈ ಚಿತ್ರದಲ್ಲಿ ಲಿಖಿತ್ ಶೆಟ್ಟಿ, ಖುಷಿ ರವಿ, ಹಾಗೂ ತೇಜಸ್ವಿನಿ ಶರ್ಮ ಪ್ರಮುಖ ಪಾತ್ರದಲ್ಲಿದ್ದು, ರಂಗಾಯಣ ರಘು ಸೇರಿದಂತೆ ಸುಜಯ್ ಶಾಸ್ತ್ರಿ, ರಮೇಶ್ ಪಂಡಿತ್, ಚಂದ್ರಕಲಾ ಮೋಹನ್, ಗಣೇಶ್ ರಾವ್, ನಾಗೇಂದ್ರ ಅರಸ್, ಪೃಥ್ವಿ ಗೌಡ, ಹರ್ಷಿತಾ ಭಟ್, ಉಳಿದ ಪಾತ್ರವರ್ಗದಲ್ಲಿದ್ದಾರೆ. ಗುರುಕಿರಣ್ ಸಂಗೀತ ಸಂಯೋಜನೆ ನೀಡಿದ್ದು, ದೀಪು ಎಸ್ ಕುಮಾರ್ ಸಂಕಲನ, ಹರೀಶ್ ಗೌಡ ಸಂಭಾಷಣೆ, ಮನೋಹರ್ ಜೋಶಿ ಛಾಯಾಗ್ರಹಣವಿದೆ.