‘ಸಕ್ಕರೆ’ಯಲ್ಲಿದೆ ತಲೆಹೊಟ್ಟಿಗೆ ಪರಿಹಾರ

ಸಕ್ಕರೆಯಿಂದ ರುಚಿ ರುಚಿಯಾದ ತಿಂಡಿ ತಯಾರಿಸುವುದರ ಜೊತೆಗೆ ತಲೆಯ ಹೊಟ್ಟನ್ನು ಕೂಡ ನಿವಾರಿಸಿಕೊಳ್ಳಬಹುದು. ಹೇಗೆ ಅಂತೀರಾ.

* ಸ್ವಲ್ಪ ಸಕ್ಕರೆ, ಆಲಿವ್ ತೈಲ ಮತ್ತು ಒಂದು ಚಿಟಿಕೆ ಉಪ್ಪು ಜೊತೆ ಸೇರಿಸಿ ಸ್ಕ್ರಬ್ ಮಾಡಿಕೊಳ್ಳಿ. ಇದನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ ಮತ್ತು ಬೆರಳುಗಳನ್ನು ಬಳಸಿಕೊಂಡು ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಒಂದು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯ ಹಾಗೆ ಬಿಡಿ. ಇದರ ಬಳಿಕ ನೀರಿನಿಂದ ತೊಳೆಯಿರಿ.

* ಅಲೋವೆರಾದಲ್ಲಿ ಶಮನಕಾರಿ ಗುಣಗಳಿವೆ ಮತ್ತು ಇದು ಒಣ ತಲೆಬುರುಡೆ ಮತ್ತು ತಲೆಹೊಟ್ಟನ್ನು ನಿವಾರಿಸಲು ನೆರವಾಗುತ್ತದೆ. ಅಲೋವೆರಾ ಜೆಲ್ ಗೆ ಸಕ್ಕರೆ ಪುಡಿಯನ್ನು ಮಿಕ್ಸ್ ಮಾಡಿ ಇದನ್ನು ತಲೆಬುರುಡೆಗೆ ಹಚ್ಚಿಕೊಂಡು ಸ್ಕ್ರಬ್ ಮಾಡಿ 30 ನಿಮಿಷ ಬಿಟ್ಟು ತೊಳೆಯಿರಿ.

* 2 ಚಮಚ ಆಲಿವ್ ತೈಲವನ್ನು ಸ್ವಲ್ಪ ಬಿಸಿ ಮಾಡಿ. ಇದಕ್ಕೆ ಸಕ್ಕರೆ ಹಾಕಿ, ಎರಡನ್ನು ಸರಿಯಾಗಿ ಮಿಶ್ರಣ ಮಾಡಿ. ಇದನ್ನು ತಲೆಬುರುಡೆಗೆ ಮಸಾಜ್ ಮಾಡಿ 30-45 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ನೀರಿನಿಂದ ತೊಳೆಯಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read