ಚರ್ಮಕ್ಕೆ ಹಾನಿ ಮಾಡಬಹುದು ನೀವು ಆಯ್ಕೆ ಮಾಡಿಕೊಳ್ಳುವ ಸಾಬೂನು

ಸಾಬೂನು ಕೊಳ್ಳುವಾಗ ನೀವು ಬೆಲೆ, ಗಾತ್ರ, ಸುವಾಸನೆಯನ್ನು ಆಧರಿಸಿ ಕೊಳ್ಳುವವರೇ… ಹಾಗಾದರೆ ನಿಮ್ಮ ನಿರ್ಧಾರ ತಪ್ಪು.

ಸೋಪು ಕೊಳ್ಳುವ ಮುನ್ನ ಅದರ ತಯಾರಿಗೆ ಬಳಸಿದ ಸಾಮಾಗ್ರಿಗಳನ್ನು ಗಮನಿಸಬೇಕು. ನೀವು ಎಣ್ಣೆಯುಕ್ತ ಚರ್ಮ ಹೊಂದಿದ್ದರೆ ಔಷಧೀಯ ಸೋಪ್ ಬಳಸಬೇಕು. ಒಣಚರ್ಮ ಹೊಂದಿರುವವರು ಸೋಪ್ ಮುಕ್ತ ಕ್ಲೆನ್ಸರ್ ಬಳಸಬೇಕು.

ಗುಲಾಬಿ, ಗಂಧ, ಅಲೋವೇರಾ ಮೊದಲಾದ ಸುಗಂಧ ದ್ರವ್ಯಗಳು ಚರ್ಮವನ್ನು ಹಾನಿಗೊಳಿಸುತ್ತವೆ. ಪರಿಮಳ ಬೀರುವ ಇವು ಚರ್ಮಕ್ಕೆ ಹಾನಿ ಮಾಡುತ್ತವೆ ಎಂಬುದು ನಿಮಗೆ ಗೊತ್ತೇ?

ದೈನಂದಿನ ಬಳಕೆಯ ಸಾಬೂನು ಸುಗಂಧ ಮತ್ತು ರಾಸಾಯನಿಕಗಳನ್ನು ಹೊಂದಿದ್ದು ತೇವಾಂಶವನ್ನು ಕಡಿಮೆ ಮಾಡುತ್ತವೆ. ಸಾಬೂನಿನಲ್ಲಿರುವ ಗ್ಲಿಸರಿನ್ ಚರ್ಮದ ತೇವಾಂಶವನ್ನು ಉಳಿಸುತ್ತದೆ. ಡ್ರೈ ಸ್ಕಿನ್ ಇರುವವರಿಗೆ ಇದು ಪ್ರಯೋಜನಕಾರಿ. ಸ್ನಾನ ಮಾಡಲು ಯಾವುದಾದರೊಂದು ಸೋಪು ಇದ್ದರೆ ಸರಿ ಎಂದುಕೊಳ್ಳುವ ಮೊದಲು ನಿಮ್ಮ ತ್ವಚೆಗೆ ಹೊಂದುವ ಸೋಪು ಬಳಸಲು ಮರೆಯದಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read