ದಂಗಾಗಿಸುವಂತಿರುತ್ತೆ ಜಪಾನೀ ಮಹಿಳೆಯರ ತ್ವಚೆಯ ಸೌಂದರ್ಯ; ಇಲ್ಲಿದೆ ಅವರ ಬ್ಯೂಟಿ ಸೀಕ್ರೆಟ್‌….!

ಜಪಾನೀಯರ ತ್ವಚೆ ಬಹಳ ಸುಂದರವಾಗಿರುತ್ತದೆ. ಅದರಲ್ಲೂ ಜಪಾನೀ ಮಹಿಳೆಯರ ತ್ವಚೆ ಫಳ ಫಳ ಹೊಳೆಯುತ್ತಿರುತ್ತದೆ. ಈ ಅದ್ಭುತ ತ್ವಚೆ ಹಿಂದಿನ ಪ್ರಮುಖ ರಹಸ್ಯವೆಂದರೆ ಅವರ ಆಹಾರ ಪದ್ಧತಿ. ಜಪಾನೀಯರು ಪ್ರತಿದಿನ ಗ್ರೀನ್‌ ಟೀ ಸೇವಿಸುತ್ತಾರೆ. ಗ್ರೀನ್‌ ಟೀ ಜಪಾನೀ ಸಂಸ್ಕೃತಿಯ ಭಾಗವಾಗಿದೆ. ಏಕೆಂದರೆ ಇದು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ ಮತ್ತು UV ಕಿರಣಗಳ ಹಾನಿಕಾರಕ ಪರಿಣಾಮಗಳಿಂದ ಚರ್ಮವನ್ನು ರಕ್ಷಿಸುತ್ತದೆ.

ಜಪಾನಿನ ಮಹಿಳೆಯರು ಹಸಿರು ಚಹಾವನ್ನು ಸೇವಿಸುವುದು ಮಾತ್ರವಲ್ಲದೆ ಅದನ್ನು ಟೋನರ್ ಆಗಿಯೂ ಬಳಸುತ್ತಾರೆ. ಗ್ರೀನ್‌ ಟೀಯನ್ನು ತಣ್ಣಗಾಗಿಸಿಕೊಂಡು ಅದನ್ನು ಮುಖದ ಮೇಲೆ ಹಚ್ಚಿಕೊಳ್ಳುತ್ತಾರೆ.

ಜಪಾನೀಯರ ಸುಂದರ ತ್ವಚೆಯ ಹಿಂದಿರುವ ಮತ್ತೊಂದು ಪ್ರಮುಖ ಅಂಶವೆಂದರೆ ಅಕ್ಕಿ ಹಿಟ್ಟು. ಅಕ್ಕಿ ಹಿಟ್ಟು ಕೂಡ ಉತ್ಕರ್ಷಣ ನಿರೋಧಕವಾಗಿದೆ. ಇದು ನಮ್ಮ ತ್ವಚೆಯ ಮೇಲಿನ ಕಲೆಗಳನ್ನು ನಿವಾರಿಸುತ್ತದೆ. ಚರ್ಮವನ್ನು ಮೃದುಗೊಳಿಸುತ್ತದೆ.

ಕಾಲಜನ್ ಸೇವನೆಯಿಂದ ತ್ವಚೆ ಹೊಳೆಯುತ್ತದೆ ಮತ್ತು ಗಟ್ಟಿಯಾಗುತ್ತದೆ. ಹೀಗಾಗಿ ಜಪಾನೀ ಮಹಿಳೆಯರು ಮೀನು, ಮೂಳೆ ಸಾರು ಮತ್ತು ಕಾಲಜನ್ ಸಮೃದ್ಧವಾಗಿರುವ ಮೊಟ್ಟೆಗಳನ್ನು ಸೇವಿಸಲು ಇಷ್ಟಪಡುತ್ತಾರೆ.

ಲಿಪೊಫಿಲಿಕ್ ಮತ್ತು ವಿಟಮಿನ್-ಪ್ಯಾಕ್ಡ್ ಸೀರಮ್‌ಗಳು ಕೂಡ ಜಪಾನೀ ಮಹಿಳೆಯರ ಸುಂದರ ತ್ವಚೆಗೆ ಕಾರಣ. ಇದು ಚರ್ಮಕ್ಕೆ ತೇವಾಂಶವನ್ನು ನೀಡುತ್ತದೆ. ದೇಹದಿಂದ ವಿಷವನ್ನು ಹೊರಹಾಕುತ್ತದೆ.

ವಾರಕ್ಕೊಮ್ಮೆ ಅಥವಾ ಎರಡು ಬಾರಿ ಸ್ಕಿನ್‌ ಎಕ್ಸ್‌ಫೋಲಿಯೇಟ್ ಮಾಡಬೇಕು. ಇದು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುತ್ತದೆ ಮತ್ತು ಆರೋಗ್ಯಕರ ಚರ್ಮವು ಹೊರಹೊಮ್ಮಲು ಅನುವು ಮಾಡಿಕೊಡುತ್ತದೆ. ಜಪಾನೀ ಮಹಿಳೆಯರು ಇದನ್ನು ತಪ್ಪದೇ ಅನುಸರಿಸುತ್ತಾರೆ.

ಕೊಳಕು ಮತ್ತು ಕಲ್ಮಶಗಳನ್ನು ಹೊರಹಾಕಲು ವಾರಕ್ಕೊಮ್ಮೆ ಅಥವಾ ಎರಡು ಬಾರಿ ಜಪಾನಿನ ಮಹಿಳೆಯರು ಫೇಸ್‌ ಮಾಸ್ಕ್‌ ಬಳಸುತ್ತಾರೆ. ಇದು ತ್ವಚೆಯನ್ನು ಟೋನ್ ಮಾಡಲು ಸಹಾಯ ಮಾಡುತ್ತದೆ ಮತ್ತು ಚರ್ಮದಲ್ಲಿ ತೇವಾಂಶವನ್ನು ಕಾಪಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read