ಕಾಲುಂಗುರದಲ್ಲೂ ಇದೆ ಮಹಿಳೆಯ ʼಆರೋಗ್ಯʼದ ಗುಟ್ಟು…….!

ಬೆಳ್ಳಿ ಕಾಲುಂಗುರ ಶ್ರೀಮತಿಗೆ ಸುಂದರ. ಮದುವೆಯಾದ ಮಹಿಳೆ ಕಾಲುಂಗುರ ಧರಿಸಿದರೆ ಶೋಭೆ. ಇದು ಮದುವೆಯ ಪ್ರತೀಕ ಎಂದು ಕೆಲವರು ತಿಳಿದಿದ್ದರೆ ಮತ್ತೆ ಕೆಲವರು ಇದೊಂದು ಸಂಪ್ರದಾಯವೆಂದು ನಂಬುತ್ತಾರೆ. ಆದರೆ ಇದಕ್ಕೊಂದು ವೈಜ್ಞಾನಿಕ ಕಾರಣ ಇದೆ. ಅದರ ಬಗ್ಗೆ ಕೆಲವರಿಗೆ ಮಾತ್ರ ತಿಳಿದಿದೆ.

ವೇದಗಳ ಅನುಸಾರ ಎರಡು ಕಾಲು ಬೆರಳಿಗೆ ಬೆಳ್ಳಿ ಕಾಲುಂಗುರ ಧರಿಸುವುದರಿಂದ ತಿಂಗಳ ಮುಟ್ಟು ಸರಿಯಾಗಿ ಆಗುವುದಲ್ಲದೇ ಗರ್ಭಧಾರಣೆ ಸುಲಭವಾಗುತ್ತದೆ.

ಹೆಬ್ಬೆರಳಿನ ಪಕ್ಕದಲ್ಲಿರುವ ಬೆರಳಿನಲ್ಲೊಂದು ವಿಶೇಷ ನರವಿದ್ದು, ಅದು ಗರ್ಭಕೋಶದೊಂದಿಗೆ ಸಂಪರ್ಕ ಹೊಂದಿರುತ್ತದೆ. ಅದು ಗರ್ಭಕೋಶವನ್ನು ನಿಯಂತ್ರಿಸುತ್ತದೆ. ಅಲ್ಲದೆ ರಕ್ತದೊತ್ತಡವನ್ನು ಸಮತೋಲನದಲ್ಲಿಡುತ್ತದೆ.

ಕಾಲುಂಗುರ ನರಕ್ಕೆ ತಾಗುವುದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಒತ್ತಡದ ಜೀವನ ಶೈಲಿಯಿಂದಾಗಿ ಮಹಿಳೆಯರು ಅನಿಯಮಿತ ಋತುಚಕ್ರ ಸಮಸ್ಯೆಯಿಂದ ಬಳಲುತ್ತಾರೆ. ಅಂತವರು ಕಾಲುಂಗುರ ಧರಿಸುವುದು ಉತ್ತಮ. ಇದು ಋತುಚಕ್ರ ನಿಯಮಿತ ರೂಪದಲ್ಲಿ ಆಗಲು ಸಹಕಾರಿ. ಸಂತಾನೋತ್ಪತ್ತಿ ಅಂಗಗಳು ಆರೋಗ್ಯವಾಗಿರಲು ಕಾಲುಂಗುರ ನೆರವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read