ಈರುಳ್ಳಿ ಸಿಪ್ಪೆಯಲ್ಲಿ ಅಡಗಿದೆ ‘ಆರೋಗ್ಯ’ದ ಗುಟ್ಟು

ಈರುಳ್ಳಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈರುಳ್ಳಿಯನ್ನು ನಾವು ಅಡುಗೆಗೆ ಬಳಸುತ್ತೇವೆ. ಆದರೆ ಅದರ ಸಿಪ್ಪೆಯನ್ನು ನಾವು ಎಸೆಯುತ್ತೇವೆ. ಆದರೆ ಈ ಸಿಪ್ಪೆಗಳಿಂದಲೂ ಕೂಡ ನಮ್ಮ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.

* ನಿಮಗೆ ಗಂಟಲು ನೋವು ಕಾಡುತ್ತಿದ್ದರೆ ಈರುಳ್ಳಿ ಸಿಪ್ಪೆಯನ್ನು ನೀರಿನಲ್ಲಿ ಕುದಿಸಿ ಸೇವಿಸಿ. ಇದರಲ್ಲಿ ಉರಿಯೂತದ ಗುಣಗಳಿರುವುದರಿಂದ ಗಂಟಲು ನೋವು ಬೇಗ ವಾಸಿಯಾಗುತ್ತದೆ.

* ಕೂದಲನ್ನು ಈರುಳ್ಳಿ ಸಿಪ್ಪೆಯನ್ನು ಹಾಕಿ ಕುದಿಸಿದ ನೀರಿನಲ್ಲಿ ತೊಳೆಯಿರಿ. ಇದರಿಂದ ತಲೆಹೊಟ್ಟು ಸಮಸ್ಯೆ ನಿವಾರಣೆಯಾಗುತ್ತದೆ. ಕೂದಲು ಉದ್ದವಾಗಿ ಹಾಗೂ ದಪ್ಪವಾಗಿ ಬೆಳೆಯುವಂತೆ ಸಹಕರಿಸುತ್ತದೆ.

* ಕಾಲು ನೋವು ಮತ್ತು ಸ್ನಾಯುಗಳಲ್ಲಿ ನೋವಿದ್ದರೆ ರಾತ್ರಿ ಮಲಗುವ ಮುನ್ನ ಈರುಳ್ಳಿ ಸಿಪ್ಪೆಯ ಚಹಾ ಕುಡಿಯಿರಿ. ಇದನ್ನು ಒಂದು ವಾರ ಮಾಡಿ.

* ಈರುಳ್ಳಿ ಸಿಪ್ಪೆಯಲ್ಲಿ ಪೊಟ್ಯಾಶಿಯಂ ಅಧಿಕವಾಗಿರುತ್ತದೆ. ಹಾಗಾಗಿ ರಸಗೊಬ್ಬರ ತಯಾರಿಕೆಯಲ್ಲಿ ಈ ಸಿಪ್ಪೆಗಳನ್ನು ಬಳಸಬಹುದು. ಈ ರಸಗೊಬ್ಬರವನ್ನು ಗಿಡಕ್ಕೆ ಹಾಕಿದರೆ ಗಿಡ ಉತ್ತಮವಾಗಿ ಬೆಳೆಯುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read