ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ‘ಹರಿಹರ ವೀರ ಮಲ್ಲು’ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಮಾರ್ಚ್ 28ಕ್ಕೆ ತೆರೆ ಮೇಲೆ ಬರಲು ಸಜ್ಜಾಗಿದೆ. ಈ ಚಿತ್ರದ ಎರಡನೇ ಹಾಡನ್ನು ಇದೇ ಫೆಬ್ರವರಿ 24ರಂದು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದೆ.
ಕ್ರಿಶ್ ಜಾಗರ್ಲಮುಡಿ ಹಾಗೂ ಎ.ಎಂ. ಜ್ಯೋತಿ ಕೃಷ್ಣ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಮೆಗಾ ಸೂರ್ಯ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಎ ದಯಾಕರಾವ್ ಮತ್ತು ಎ. ಎಂ. ರತ್ನಂ ನಿರ್ಮಾಣ ಮಾಡಿದ್ದಾರೆ.
ಪವನ್ ಕಲ್ಯಾಣ್ ಸೇರಿದಂತೆ ನಿಧಿ ಅಗರ್ವಾಲ್, ನರ್ಗಿಸ್ ಫಕ್ರಿ, ನೋರಾ ಫತೇಹಿ, ವಿಕ್ರಮ್‌ಜೀತ್ ವಿರ್ಕ್, ಜಿಶು ಸೇನ್‌ಗುಪ್ತಾ, ಪೂಜಿತ ಪೊನ್ನಡ, ಸಚಿನ್ ಖೇಡೇಕರ್, ರಘು ಬಾಬು, ಸುಬ್ಬರಾಜು, ನಾಸರ್, ಸುನಿಲ್, ತೆರೆ ಹಂಚಿಕೊಂಡಿದ್ದು, ಎಂ.ಎಂ.ಕೀರವಾಣಿ ಸಂಗೀತ ಸಂಯೋಜನೆ ನೀಡಿದ್ದಾರೆ. ಪ್ರವೀಣ್ ಕೆಎಲ್ ಸಂಕಲನ, ಜ್ಞಾನ ಶೇಖರ್ ವಿ. ಎಸ್, ಹಾಗೂ ಮನೋಜ್ ಪರಮಹಂಸ ಅವರ ಛಾಯಾಗ್ರಹಣವಿದೆ.