ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಥಾಂಡೆಲ್’ ಚಿತ್ರದ ಎರಡನೇ ಗೀತೆ ಇಂದು ಆದಿತ್ಯ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ‘ನಮೋ ನಮಃ ಶಿವಾಯ’ ಎಂಬ ಈ ಹಾಡಿಗೆ ಅನುರಾಗ್ ಕುಲಕರ್ಣಿ ಮತ್ತು ಹರಿಪ್ರಿಯ ಧ್ವನಿಯಾಗಿದ್ದು, ಜೊನ್ನವಿಠಲ ಸಾಹಿತ್ಯ ಬರೆದಿದ್ದಾರೆ. ಈ ಹಾಡಿನ ಪ್ರೊಮೋ ಈಗಾಗಲೇ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದೆ.
ಈ ಚಿತ್ರವನ್ನು ಗೀತಾ ಹಾರ್ಟ್ಸ್ ಬ್ಯಾನರ್ ನಲ್ಲಿ ಭಾನು ಪ್ರತಾಪ, ರಿಯಾಜ್ ಚೌಧರಿ ನಿರ್ಮಾಣ ಮಾಡಿದ್ದು, ದೇವಿ ಶ್ರೀ ಪ್ರಸಾದ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ನವೀನ್ ನೂಲಿ ಸಂಕಲನ, ವಿ.ಜೆ. ಶೇಖರ್ ನೃತ್ಯ ನಿರ್ದೇಶನ, ಶ್ಯಾಮ್ ದತ್ ಛಾಯಾಗ್ರಹಣ ಹಾಗೂ ವಿ ವೆಂಕಟ್, ವಿಕ್ರಮ್ ಮೋರ್ ಅವರ ಸಾಹಸ ನಿರ್ದೇಶನವಿದೆ.