ಸಾರ್ವಜನಿಕರೇ ಗಮನಿಸಿ : ಉಚಿತ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಮುನ್ನ ತಪ್ಪದೇ ಈ ಸುದ್ದಿ ಓದಿ!

ಬೆಂಗಳೂರು : ರಾಜ್ಯ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸುವಾಗ ಗ್ರಾಹಕರು ಎಚ್ಚರಿಕೆ ವಹಿಸುವುದು ಅಗತ್ಯ. ಏಕೆಂದರೆ ರಾಜ್ಯದಲ್ಲಿ ಇದೀಗ ಸೈಬರ್ ಕಳ್ಳರ ಹಾವಳಿ ಹೆಚ್ಚಾಗಿದ್ದು, ನಕಲಿ ಆ್ಯಪ್ ಗಳ ಮೂಲಕ ಮಾಹಿತಿ ಕದ್ದು ನಿಮ್ಮ ಖಾತೆಯಲ್ಲಿರುವ ಹಣವನ್ನೇ ಖಾಲಿ ಮಾಡುತ್ತಾರೆ.

ಕಳೆದ ಕೆಲ ದಿನಗಳಿಂದ ಮೊಬೈಲ್ ನಲ್ಲಿ ಅಪ್ಲಿಕೇಷನ್ ಡೌನ್ ಲೋಡ್ ಗೆ ಮುಂದಾದಾಗ ನಕಲಿ ಆಪ್ ಗಳು ಲಭ್ಯವಾಗುತ್ತಿದೆ. ಶಕ್ತಿ ಯೋಜನೆ, ಗೃಹಜ್ಯೋತಿ ಯೋಜನೆಗಳಿಗಾಗಿ ಅರ್ಜಿ ಸಲ್ಲಿಕೆ ಈಗಾಗಲೇ ಆರಂಭವಾಗಿದ್ದು, ಶೀಘ್ರವೇ ಮನೆ ಯಜಮಾನಿಗೆ 2000 ರೂ ನೀಡುವ , ಗೃಹಲಕ್ಷ್ಮೀ ಯೋಜನೆ ಕೂಡ ಆರಂಭವಾಗಲಿದೆ. ಆದರೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಈ ಯೋಜನೆಗಳ ನಕಲಿ ಆಪ್ ಗಳು ತಲೆ ಎತ್ತಿವೆ. ಇದು ಸರ್ಕಾರವೇ ಬಿಡುಗಡೆ ಮಾಡಿರುವ ಆಪ್ ಎಂದು ಡೌನ್ ಲೋಡ್ ಮಾಡಿದರೆ ಸಂಕಷ್ಟಕ್ಕೆ ಸಿಲುಕುವುದು ಗ್ಯಾರಂಟಿ.

ನಕಲಿ ಆಪ್ ಗಳಿಂದ ನಮ್ಮ ಮೊಬೈಲ್ ಪರ್ಸನಲ್ ಡೀಟೇಲ್ಸ್ ಹಾಗೂ ಡೇಟಾ ಕಳುವಾಗುವ ಸಾಧ್ಯತೆ ಇದೆ. ಅಲ್ಲದೇ ನಕಲಿ ಆಪ್ ನಲ್ಲಿ ಅರ್ಜಿ ಸಲ್ಲಿಸಿದರೆ ನಮ್ಮ ಅಕೌಂಟ್ ನಲ್ಲಿರುವ ಹಣದ ಜೊತೆ ಇನ್ನಿತರ ಮಾಹಿತಿಗಳು ಸೋರಿಕೆಯಾಗುವ ಸಾಧ್ಯತೆ ಇದೆ. ಸಧ್ಯ ಗೃಹಲಕ್ಷ್ಮೀ ಯೋಜನೆ ಹೆಸರಲ್ಲಿ ಪ್ಲೇ ಸ್ಟೋರ್ ನಲ್ಲಿ ನಕಲಿ ಆಪ್ ಗಳು ತಲೆ ಎತ್ತಿವೆ. ಪ್ಲೇ ಸ್ಟೋರ್ ಆಪ್ ಮೂಲಕ ಅರ್ಜಿ ಸಲ್ಲಿಸುವ ಬದಲು ಸರ್ಕಾರದ ಸೇವಾ ಸಿಂಧು ಆಪ್ ಮೂಲಕವೇ ಅರ್ಜಿ ಸಲ್ಲಿಸುವುದು ಉತ್ತಮ.

ಗೃಹಲಕ್ಷ್ಮಿ ಹೆಸರಿನಲ್ಲಿ ಗೃಹ ಲಕ್ಷ್ಮಿ ಯೋಜನಾ ಆ್ಯಪ್, ಕರ್ನಾಟಕ ಲಕ್ಷ್ಮಿ ಯೋಜನಾ ಆ್ಯಪ್, ಗೃಹಲಕ್ಷ್ಮಿ ಸ್ಕೀಮ್ ಆ್ಯಪ್, ಗೃಹಲಕ್ಷ್ಮಿ ಯೋಜನೆ ಅಪ್ಲಿಕೇಶನ್ ಆ್ಯಪ್ ಗಳು ತಲೆ ಎತ್ತಿದೆ.ನೀವೇನಾದರೂ ಈ ನಕಲಿ ಆ್ಯಪ್ ಬಳಸಿದ್ರೆ ನಿಮ್ಮ ಬ್ಯಾಂಕ್ ಖಾತೆಗಳಿಗೂ ಕನ್ನ ಹಾಕುವ ಸಾಧ್ಯತೆಯಿದೆ. ಆದ್ದರಿಂದ ನೀವು ಎಚ್ಚರದಿಂದಿರುವುದು ಒಳಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read