ಸಿ ಆರ್ ಬಾಬಿ ನಿರ್ದೇಶನದ ಶೈನ್ ಶೆಟ್ಟಿ ಅಭಿನಯದ ‘ಜಸ್ಟ್ ಮ್ಯಾರೀಡ್’ ಚಿತ್ರದ ‘ಕೇಳೋ ಮಚ್ಚಾ’ ಎಂಬ ಪಾರ್ಟಿ ಸಾಂಗ್ ಇದೆ ಜನವರಿ 14ರಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗುತ್ತಿದೆ. ನಕಾಶ್ ಅಜೀಜ್ ಈ ಹಾಡಿಗೆ ಧ್ವನಿಯಾಗಿದ್ದು, ಬಿ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ನೀಡಿದ್ದಾರೆ. ನಾಗಾರ್ಜುನ ಶರ್ಮಾ ಅವರ ಸಾಹಿತ್ಯವಿದೆ.
ಈ ಚಿತ್ರದಲ್ಲಿ ಶೈನ್ ಶೆಟ್ಟಿ ಮತ್ತು ಅಂಕಿತ ಅಮರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ದೇವರಾಜ್, ಶೃತಿ ಹರಿಹರನ್, ಅಚ್ಯುತ್ ಕುಮಾರ್, ಅನುಪ್ ಭಂಡಾರಿ, ಸಾಕ್ಷಿ ಅಗರ್ವಾಲ್, ಶ್ರೀಮನ್, ರವಿಶಂಕರ್ ಗೌಡ, ಸಂಗೀತಾ ಅನಿಲ್, ವಾಣಿ ಹರಿಕೃಷ್ಣ, ಶ್ರುತಿ, ದೇವರಾಜ್ ಉಳಿದ ತಾರಾಂಗಣದಲ್ಲಿದ್ದಾರೆ. ಬಿ ಅಜನೀಶ್ ಲೋಕನಾಥ್ ಹಾಗೂ ಸಿ ಆರ್ ಬಾಬಿ ನಿರ್ಮಾಣ ಮಾಡಿದ್ದು, ಶ್ರೀಕಾಂತ್ ಸಂಕಲನ, ರಘು ನಿಡುವಳ್ಳಿ ಸಂಭಾಷಣೆ, ವಿಕ್ರಂ ಮೋರ್ ಸಾಹಸ ನಿರ್ದೇಶನವಿದೆ.