BIGG NEWS : ಆಳಾಗಿದ್ದವನೇ ಅರಸನ ಕತ್ತು ಕೊಯ್ದ : ಸಿ.ಪಿ ಯೋಗೇಶ್ವರ್ ಭಾವನ ಕೊಲೆ ರಹಸ್ಯ ಬಯಲು..!

ಚಾಮರಾಜನಗರ : ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಬಾವ ಮಹದೇವಯ್ಯ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಕೂಲಿ ಕೆಲಸದಾಳೇ ಮಾಲೀಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ತಮಿಳುನಾಡು ಮೂಲದ ಮುರುಗೇಶ್ (40) ಈತನೇ ಸಿ.ಪಿ ಯೋಗೇಶ್ವರ್ ಬಾವ ಮಹದೇವಯ್ಯ ಅವರ ಕೊಲೆ ಪ್ರಕರಣ ರೂವಾರಿ.

ಈತ ತಮಿಳುನಾಡಿನ ಇನ್ನಿಬ್ಬರು ಸ್ನೇಹಿತರ ಸಹಾಯ ಪಡೆದು ಕೊಲೆ ಮಾಡಿರುವುದು ತಿಳಿದು ಬಂದಿದೆ. ಕೊಲೆ ಆರೋಪಿಯಾಗಿರುವ ಮುರುಗೇಶ್, ಈ ಹಿಂದೆ ಯೋಗೇಶ್ವರ್ ಸಹೋದರ ಗಂಗಾಧರ್ ಎಂಬುವವರ ತೋಟದ ಕಾವಲುಗಾರನಾಗಿದ್ದ. ಮಹದೇವಯ್ಯನವರ ತೋಟದ ಪಕ್ಕದಲ್ಲಿದ್ದ ಈ ತೋಟದಲ್ಲಿ ಪತ್ನಿಯ ಜೊತೆ ನೆಲೆಸಿದ್ದ ಮುರುಗೇಶ್ ಮಹದೇವಯ್ಯ ಅವರ ವಿಶ್ವಾಸ ಗಳಿಸಿದ್ದನು.

ಕೂಲಿ ಕೆಲಸ ಮಾಡುತ್ತಿದ್ದ ಮುರುಗೇಶ್ ಸಡನ್ ಆಗಿ ಶ್ರೀಮಂತ ಆಗಿ ಬಿಡಬೇಕು ಎಂದು ಮಹದೇವಯ್ಯರ ತೋಟದ ಮನೆಯ ತಿಜೋರಿಯ ಮೇಲೆ ಕಣ್ಣುಹಾಕಿ ಮಹದೇವಯ್ಯ ಅವರನ್ನು ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಮಹದೇವಯ್ಯ ಇತ್ತಿಚೆಗಷ್ಟೇ 7 ಕೋಟಿಯ ಪ್ರಾಪರ್ಟಿ ಮಾರಿ ಹಣವೆಲ್ಲಾ ತಮ್ಮ ತೋಟದ ಮನೆಯಲ್ಲೇ ಇಟ್ಟಿದ್ದಾರೆ ಎಂಬ ಸುದ್ದಿ ಈತನ ಕಿವಿಗೆ ಬೀಳುತ್ತಿದ್ದಂತೆಯೇ ತನ್ನ ಸ್ನೇಹಿತರ ಜೊತೆ ಸೇರಿಕೊಂಡು ಮಹದೇವಯ್ಯರ ಮನೆಗೆ ನುಗ್ಗಿದ್ಶಾನೆ. ಆದ್ರೆ ಮಹದೇವಯ್ಯ ಏಳೂ ಕೋಟಿ ಹಣವನ್ನ ಬ್ಯಾಂಕ್ನಲ್ಲಿ ಇಟ್ಟಿದ್ದರಂತೆ. ಹಣದ ಅವಶ್ಯಕತೆಯಿದ್ದ ಹಿನ್ನೆಲೆ ಮುರುಗನ್ ಮತ್ತಿತರರ ತಂಡ ಮಹದೇವಯ್ಯ ಅವರ ಮನೆಯಲ್ಲಿ ಹಣ, ಚಿನ್ನಾಭರಣ ದೋಚಿ ಈ ಕೃತ್ಯ ನಡೆಸಿದೆ ಎಂಬ ಆರೋಪ ಕೇಳಿಬಂದಿದೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಚೆಕ್ಕೆರೆ ಗ್ರಾಮದ ತೋಟದ ಮನೆಯಲ್ಲಿ ತಂಗಿದ್ದ 62 ವರ್ಷದ ಮಹದೇವಯ್ಯ ಅವರು ಏಕಾಏಕಿ ನಾಪತ್ತೆಯಾಗಿದ್ದರು. ಮಹದೇಶ್ವರ ಬೆಟ್ಟದಲ್ಲಿ ಟವರ್ ಲೊಕೇಶನ್ ಟ್ರೇಸ್ ಆದ ಹಿನ್ನೆಲೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ತೀವ್ರ ತಪಾಸಣೆ ನಡೆಸಿದ್ದರು. ನಂತರ ಕೊಲೆಯಾದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿತ್ತು. ದುಷ್ಕರ್ಮಿಗಳು ಹನೂರು ಬಳಿ ಮಹದೇವಯ್ಯ ಅವರನ್ನು ಕೊಲೆ ಮಾಡಿ ಶವವನ್ನು ಅರಣ್ಯ ಪ್ರದೇಶದಲ್ಲಿ ಎಸೆದು ಹೋಗಿದ್ದರು .

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read