ಮೊದಲ ರಾತ್ರಿಯೇ ಇಂಥ ಬೇಡಿಕೆ ಇಟ್ಟ ವರ….… ಪೂರೈಸದ ವಧು ಕಥೆ ಏನಾಯ್ತು ಗೊತ್ತಾ……..?

ಬಿಹಾರದ ಔರಂಗಾಬಾದ್ ಜಿಲ್ಲೆಯ ಗೋಹ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಕ್ಷಿಣೆ ಕಿರುಕುಳ, ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಮದುವೆಯಾದ ಎಂಟೇ ದಿನದಲ್ಲಿ ಪತ್ನಿಯನ್ನು ಹತ್ಯೆ ಮಾಡಿರುವ ಪತಿ ತಲೆಮರೆಸಿಕೊಂಡಿದ್ದಾನೆ.

ಗಯಾ ಜಿಲ್ಲೆಯ ತಾರೈ ಗ್ರಾಮದ ನಿವಾಸಿ ಸಂಗೀತಾಳನ್ನು ಜುಲೈ 12 ರಂದು ಅಮರಜೀತ್ ಪಾಸ್ವಾನ್ ಎಂಬಾತನಿಗೆ ಮದುವೆ ಮಾಡಲಾಗಿತ್ತು. ಆತ ಕೊಸ್ದಿಹ್ರಾ ಗ್ರಾಮಕ್ಕೆ ಸೇರಿದವನಾಗಿದ್ದು, ಮದುವೆಯ ಮೊದಲ ರಾತ್ರಿಯೇ ವರದಕ್ಷಿಣೆ ಹೆಚ್ಚಿಗೆ ನೀಡುವಂತೆ ಹಿಂಸೆ ಶುರು ಮಾಡಿದ್ದ. ಜುಲೈ 16ರಂದು ಪತ್ನಿಯನ್ನು ತವರಿಗೆ ಬಿಟ್ಟು ಹೋಗಿದ್ದ ಅಮರಜೀತ್‌, ವರದಕ್ಷಿಣೆ ತರುವಂತೆ ಹೇಳಿದ್ದ. ಈಗಾಗಲೇ ಹಣ, ಹೊಂಡಾ ಬೈಕ್‌ ಸೇರಿದಂತೆ ಅನೇಕ ವಸ್ತುಗಳನ್ನು ನೀಡಿದ್ದ ಕಾರಣ ಸುನಿತಾ ಈ ವಿಷ್ಯವನ್ನು ಮನೆಯವರಿಗೆ ಹೇಳಿರಲಿಲ್ಲ. ಜುಲೈ 18ರಂದು ಪತ್ನಿಯನ್ನು ವಾಪಸ್‌ ಕರೆದುಕೊಂಡು ಹೋಗಿದ್ದ ಅಮರ್ಜಿತ್‌, ಜುಲೈ 22ರಂದು ಕರೆ ಮಾಡಿ, ಸಂಗೀತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದಿದ್ದಾನೆ.

ಕುಟುಂಬಸ್ಥರು ಸಂಗೀತಾ ಮನೆಗೆ ಹೋದಾಗ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಅನುಮಾನಗೊಂಡ ಪಾಲಕರು, ಪೊಲೀಸರಿಗೆ ದೂರು ನೀಡಿದ್ದಾರೆ. ಮನೆಯಲ್ಲಿ ಆಕೆ ಪತಿ, ಅತ್ತೆ ಯಾರೂ ಇರಲಿಲ್ಲ. ಎಲ್ಲರೂ ತಲೆಮರೆಸಿಕೊಂಡಿದ್ದು, ಅವರ ಶೋಧ ನಡೆಯುತ್ತಿದೆ. ಸಂಗೀತಾ ಮದುವೆ ಮರುದಿನ ವರದಕ್ಷಿಣೆ ಕಿರುಕುಳದ ಬಗ್ಗೆ ತನ್ನ ಸಹೋದರಿಗೆ ಹೇಳಿದ್ದಳು ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read