ಸಖತ್‌ ಲುಕ್‌ನಲ್ಲಿ ಬಂದಿದೆ ಹೊಸ Jawa 42 Bobber Black Mirror…! ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿವರ

Jawa 42 Bobber Black Mirror Price, Images, Mileage, Specs & Features

ಜಾವಾ ಯೆಜ್ಡಿ ಮೋಟಾರ್‌ ಸೈಕಲ್ಸ್, ಜಾವಾ 42 ಬಾಬರ್‌ನ ಹೊಸ ಬ್ಲ್ಯಾಕ್ ಮಿರರ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ಹೊಸ ರೂಪಾಂತರದ ಆರಂಭಿಕ ಬೆಲೆ 2.25 ಲಕ್ಷ ರೂಪಾಯಿ ಇದೆ. ಹೊಸ ಕಪ್ಪು ಆವೃತ್ತಿಯ ಮಾದರಿಯು ಕಾಸ್ಮೆಟಿಕ್ ನವೀಕರಣಗಳನ್ನು ಮಾತ್ರವಲ್ಲದೆ ಸಾಮಾನ್ಯ ಜಾವಾ 42 ಬಾಬರ್‌ಗೆ ಹೋಲಿಸಿದರೆ ಯಾಂತ್ರಿಕ ನವೀಕರಣಗಳನ್ನು ಹೊಂದಿದೆ.

ಬ್ಲ್ಯಾಕ್ ಮಿರರ್ ಆವೃತ್ತಿಯಲ್ಲಿನ ಅತಿದೊಡ್ಡ ಸ್ಟೈಲಿಂಗ್ ನವೀಕರಣವೆಂದರೆ ಕ್ರೋಮ್-ಅಲಂಕರಿಸಿದ ಆಯಿಲ್‌ ಟ್ಯಾಂಕ್.  ಇದು ಹಿಂದಿನ ವರ್ಷದ ಐಕಾನಿಕ್ ಜಾವಾವನ್ನು ನೆನಪಿಸುತ್ತದೆ. ಬೈಕ್‌ಗೆ ಸ್ಪೋರ್ಟಿನೆಸ್ ಲುಕ್‌ ಕೂಡ ಇದೆ. ಡೈಮಂಡ್-ಕಟ್ ಅಲಾಯ್ ಚಕ್ರಗಳು ಇದರ ವಿಶೇಷತೆ. ಟ್ಯೂಬ್‌ಲೆಸ್ ಟೈರ್‌ಗಳನ್ನು ಸಹ ಅಳವಡಿಸಲಾಗಿದೆ. ಸಿಂಗಲ್ ರೈಡರ್ ಸೀಟ್, ಬಾರ್-ಎಂಡ್ ಮಿರರ್‌ಗಳು, ಬ್ಲ್ಯಾಕ್ಡ್ ಔಟ್ ಇಂಟರ್‌ನಲ್‌ಗಳು, ರನ್ನಿಂಗ್ ಗೇರ್, ವೃತ್ತಾಕಾರದ ಹೆಡ್‌ಲ್ಯಾಂಪ್‌ಗಳು ಹೀಗೆ ಬಹುತೇಕ ವಿನ್ಯಾಸ ಮೊದಲಿನಂತೆಯೇ ಇದೆ.

ಜಾವಾ 42 ಬಾಬರ್ ಬ್ಲ್ಯಾಕ್ ಮಿರರ್ 334cc, ಸಿಂಗಲ್-ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದೆ. 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ. ಕಂಪನಿಯು ಪವರ್‌ಟ್ರೇನ್‌ನಲ್ಲಿ ಕೆಲವು ಸಣ್ಣ ಆದರೆ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಹಳೆಯ 33 mm ಥ್ರೊಟಲ್ ಬಾಡಿಯನ್ನು ಸುಧಾರಿತ 38 mm ಥ್ರೊಟಲ್ ಬಾಡಿಗೆ  ಬದಲಾಯಿಸಲಾಗಿದೆ. ಬೈಕ್ ತಯಾರಕರು ಎಂಜಿನ್ ಮತ್ತು ಇಂಧನ ಮ್ಯಾಪಿಂಗ್‌ನಲ್ಲಿ ಬದಲಾವಣೆಗಳನ್ನು ಮಾಡಿದ್ದಾರೆ.

ಜಾವಾ, ಗೇರ್ ಮತ್ತು ಎಂಜಿನ್ ಕವರ್‌ನಲ್ಲಿಯೂ ಬದಲಾವಣೆಗಳನ್ನು ತಂದಿದೆ. ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್ ಅನ್ನು ಸೇರಿಸುವುದರೊಂದಿಗೆ ಗೇರ್ ಶಿಫ್ಟಿಂಗ್ ಈಗ ಸುಲಭವಾಗಿದೆ. ಅಡ್ಜಸ್ಟೇಬಲ್‌ ಸೀಟ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಡಿಜಿಟಲ್ ಕನ್ಸೋಲ್ ಮತ್ತು ಎಲ್‌ಇಡಿ ಲೈಟಿಂಗ್‌ನಂತಹ ಇತರ ವೈಶಿಷ್ಟ್ಯಗಳನ್ನು ಜಾವಾ 42 ಬಾಬರ್‌ನಲ್ಲಿ ನೀಡಲಾಗಿದೆ. ಮಿಸ್ಟಿಕ್ ಕಾಪರ್, ಮೂನ್‌ಸ್ಟೋನ್ ವೈಟ್ ಮತ್ತು ಜಾಸ್ಪರ್ ರೆಡ್ ಬಣ್ಣದ ಬೈಕ್‌ಗಳು ಸಹ ಲಭ್ಯವಿವೆ. ಇವುಗಳ ಬೆಲೆ 2.12 ಲಕ್ಷದಿಂದ 2.15 ಲಕ್ಷ ರೂಪಾಯಿವರೆಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read