ಯಾವ ಸೆಲೆಬ್ರಿಟಿಗೂ ಕಮ್ಮಿಯಿಲ್ಲ ರಾಜಸ್ಥಾನದ ನೂತನ ಉಪ‌ ಮುಖ್ಯಮಂತ್ರಿ…!

ರಾಜಸ್ಥಾನದ ಉಪ ಮುಖ್ಯಮಂತ್ರಿ ಪಟ್ಟ ರಾಜಕುಮಾರಿ ದಿಯಾ ಮತ್ತು ಪ್ರೇಮಚಂದ್ ಬೈರ್ವಾ ಅವರಿಗೆ ದಕ್ಕಿದೆ. ರಾಜಕುಮಾರಿ ದಿಯಾ,  ಬ್ರಿಗೇಡಿಯರ್ ಭವಾನಿ ಸಿಂಗ್ ಮತ್ತು ಮಹಾರಾಣಿ ಪದ್ಮಿನಿ ದೇವಿ ಅವರ ಪುತ್ರಿ. 10 ವರ್ಷಗಳ ಹಿಂದೆ ದಿಯಾ ರಾಜಕೀಯ ಪ್ರವೇಶಿಸಿದ್ದರು.

ದಿಯಾ ಒಬ್ಬ ರಾಜಕಾರಣಿಯಾಗಿ ಮಾತ್ರವಲ್ಲ ತಮ್ಮ ಸ್ಟೈಲಿಶ್‌ ಮತ್ತು ಫ್ಯಾಷನೇಬಲ್‌ ಬದುಕಿನಿಂದಲೂ ಎಲ್ಲರ ಗಮನ ಸೆಳೆದಿದ್ದಾರೆ. ಆಕರ್ಷಕ ಮತ್ತು ಸಾಂಪ್ರದಾಯಿಕ ಉಡುಗೆಗಳ ಮೂಲಕ ದಿಯಾ ಆಗಾಗ ಸುದ್ದಿಯಾಗುತ್ತಾರೆ. ದಿಯಾ ಕುಮಾರಿ ಅವರಿಗೆ ಸೀರೆ ಉಡುವುದು ಬಹಳ ಇಷ್ಟವಂತೆ. ಹಾಗಾಗಿ ವಿವಿಧ ಆಕರ್ಷಕ ಬಣ್ಣ ಮತ್ತು ವಿನ್ಯಾಸದ ಸೀರೆಗಳನ್ನು ಅವರು ಧರಿಸುತ್ತಾರೆ.

ಲೆಹರಿಯಾ ಡಿಸೈನ್‌ನ ಸೀರೆ ಇಲ್ಲದೆ ರಾಜಸ್ಥಾನಿ ಫ್ಯಾಷನ್ ಅಪೂರ್ಣ. ಹಾಗಾಗಿಯೇ ದಿಯಾ ಕುಮಾರಿ ಕೂಡ ಸುಂದರವಾದ ಲೆಹರಿಯಾ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. ಇದರ ತೂಕ ತುಂಬಾ ಕಡಿಮೆ, ಲುಕ್‌ ಮಾತ್ರ ಸಿಕ್ಕಾಪಟ್ಟೆ ರಿಚ್‌.

ಡಿಸೈನರ್ ಜಾರ್ಜೆಟ್ ಸೀರೆಯಲ್ಲೂ ದಿಯಾ ಮಿಂಚಿದ್ದಾರೆ. ದಿಯಾ ಧರಿಸಿರುವ ಸ್ಟೈಲಿಶ್ ಬ್ಲೌಸ್‌ಗಳು ಕೂಡ ಟ್ರೆಂಡಿಂಗ್‌ನಲ್ಲಿವೆ. ಪಾರ್ಟಿ, ಸಮಾರಂಭಗಳು, ಮದುವೆಗೆ ಸೂಕ್ತವಾದ ಸುಂದರ ಸೀರೆಗಳಲ್ಲೂ ದಿಯಾ ಕಾಣಿಸಿಕೊಂಡಿದ್ದಾರೆ. ಚುನರಿ ಸೀರೆ, ಕಾಟನ್, ಮಲ್ಮಲ್‌ ಇವೆಲ್ಲವೂ ರಾಜಕುಮಾರಿಯ ಫೇವರಿಟ್‌. ತಮ್ಮ ಲುಕ್‌ ಹಾಗೂ ಫ್ಯಾಷನ್‌ ಸೆನ್ಸ್‌ ಮೂಲಕ ಗಮನಸೆಳೆದಿದ್ದ ರಾಜಕುಮಾರಿ ದಿಯಾ ಉಪಮುಖ್ಯಮಂತ್ರಿ ಹುದ್ದೆಯನ್ನು ಹೇಗೆ ನಿಭಾಯಿಸ್ತಾರೆ ಅನ್ನೋದು ಎಲ್ಲರಲ್ಲೂ ಇರುವ ಕುತೂಹಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read