ವಿನಯ್ ರಾಜಕುಮಾರ್ ಅಭಿನಯದ ‘ಅಂದೊಂದಿತ್ತು ಕಾಲ’ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು ಇನ್ನೇನು ತೆರೆ ಮೇಲೆ ಬರಲು ಸಿದ್ಧವಾಗಿದೆ. ಈ ಚಿತ್ರದ ‘ಮುಂಗಾರು ಮಳೆಯಲ್ಲಿ’ ಎಂಬ ಮೆಲೋಡಿ ಹಾಡು ಇದೆ ಜನವರಿ 14 ಸಂಕ್ರಾಂತಿ ಹಬ್ಬದಂದು ಬಿಡುಗಡೆಯಾಗುತ್ತಿದೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದೆ ದಕ್ಷಿಣ ಭಾರತದ ಖ್ಯಾತ ಗಾಯಕ ಸಿದ್ ಶ್ರೀರಾಮ್ ಈ ಹಾಡಿಗೆ ಧ್ವನಿಯಾಗಿದ್ದಾರೆ.
ಈ ಚಿತ್ರವನ್ನು ಭುವನ್ ಮೂವೀಸ್ ಬ್ಯಾನರ್ ನಲ್ಲಿ ಭುವನ್ ಸುರೇಶ್ ನಿರ್ಮಾಣ ಮಾಡಿದ್ದು, ವಿನಯ್ ರಾಜಕುಮಾರ್ ಗೆ ಜೋಡಿಯಾಗಿ ಅದಿತಿ ಪ್ರಭುದೇವ ಅಭಿನಯಿಸಿದ್ದಾರೆ. ಇನ್ನುಳಿದಂತೆ ನಿಶಾ ರವಿ ಕೃಷ್ಣನ್, ಜಗ್ಗಪ್ಪ, ಗೋವಿಂದೇಗೌಡ ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಎಆರ್ ಕೃಷ್ಣ ಅವರ ಸಂಕಲನ, ಹಾಗೂ ಅಭಿಷೇಕ್ ಜಿ ಕಾಸರಗೂಡು ಛಾಯಾಗ್ರಹಣವಿದೆ. ರಾಘವೇಂದ್ರ ವಿ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.