ಕೀರ್ತಿ ಕುಚೇಲ ನಿರ್ದೇಶನದ ವಿನಯ್ ರಾಜಕುಮಾರ್ ಅಭಿನಯದ ‘ಅಂದೊಂದಿತ್ತು ಕಾಲ’ ಚಿತ್ರದ ”ಮುಂಗಾರು ಮಳೆಯಲ್ಲಿ” ಎಂಬ ಮೆಲೋಡಿ ಹಾಡು ನಾಳೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗುತ್ತಿದೆ. ದಕ್ಷಿಣ ಭಾರತದ ಖ್ಯಾತ ಗಾಯಕ ಸಿದ್ ಶ್ರೀರಾಮ್ ಈ ಹಾಡಿಗೆ ಧ್ವನಿಯಾಗಿದ್ದು, ಸಂಗೀತ ಸಂಯೋಜನೆ ನೀಡಿದ್ದಾರೆ.
ಈ ಚಿತ್ರವನ್ನು ಭುವನ್ ಮೂವೀಸ್ ಬ್ಯಾನರ್ ನಲ್ಲಿ ಭುವನ್ ಸುರೇಶ್ ನಿರ್ಮಾಣ ಮಾಡಿದ್ದು, ವಿನಯ್ ರಾಜಕುಮಾರ್ ಗೆ ಜೋಡಿಯಾಗಿ ದಾವಣಗೆರೆ ಬೆಡಗಿ ಅದಿತಿ ಪ್ರಭುದೇವ ಅಭಿನಯಿಸಿದ್ದಾರೆ. ಇನ್ನುಳಿದಂತೆ ನಿಶಾ ರವಿ ಕೃಷ್ಣನ್, ಜಗಪ್ಪ, ಗೋವಿಂದೇಗೌಡ ಉಳಿದ ಪಾತ್ರ ವರ್ಗದಲ್ಲಿದ್ದಾರೆ ಸಂಕಲನ ಅಭಿಷೇಕ್ ಜಿ ಕಾಸರಗೊಡು ಛಾಯಾಗ್ರಹಣ ಸಂತೋಷ್ ಮುದ್ದಿನ ಮನೆ, ಹಾಗೂ ಕ್ರಾಂತಿ ಕುಮಾರ್ ಅವರ ಸಂಭಾಷಣೆ, ಎಆರ್ ಕೃಷ್ಣ ಸಂಕಲನವಿದೆ.