ರಮಣ ರಾಜ್ ಕೆವಿ ನಿರ್ದೇಶನದ ವಿಜಯ ರಾಘವೇಂದ್ರ ಅಭಿನಯದ ಬಹು ನಿರೀಕ್ಷಿತ ‘FIR 6to6’ ಚಿತ್ರದ ಲಿರಿಕಲ್ ಹಾಡು ನಾಳೆ ಯೂಟ್ಯೂಬ್ನಲ್ಲಿ ಬಿಡುಗಡೆಯಾಗುತ್ತಿದೆ. ‘ಸಖ ನಿನ್ನ ಮುಖವನ್ನ’ ಎಂಬ ಮೆಲೋಡಿ ಗೀತೆ ಇದಾಗಿದ್ದು, ಬೆಳಿಗ್ಗೆ 11 ಗಂಟೆಗೆ ಯುಟ್ಯೂಬ್ ನಲ್ಲಿ ವೀಕ್ಷಿಸಬಹುದಾಗಿದೆ.
ಈ ಚಿತ್ರವನ್ನು ಯಶ್ ಫಿಲಂಸ್ ಬ್ಯಾನರ್ ನಲ್ಲಿ ಭಾಗ್ಯ ಆರ್ ನಿರ್ಮಾಣ ಮಾಡಿದ್ದು, ವಿಜಯ ರಾಘವೇಂದ್ರ ಅವರಿಗೆ ಜೋಡಿಯಾಗಿ ಸಿರಿರಾಜ್ ಅಭಿನಯಿಸಿದ್ದಾರೆ ಇನ್ನುಳಿದಂತೆ ನಾಗೇಂದ್ರ ಅರಸ್, ಯಶ್ ಶೆಟ್ಟಿ, ಬಾಲರಾಜು, ಕಾಮಿಡಿ ಕಿಲಾಡಿ ಸಂತು, ಗಜ ವಿದ್ಯಾಭರಣ, ಆದಿ ಕೇಶವ, ರತನ್, ಯಶ, ಶ್ವೇತಾ. ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಎಂ ಎಸ್ ತ್ಯಾಗರಾಜ ಸಂಗೀತ ಸಂಯೋಜನೆ ನೀಡಿದ್ದು, ನಾಗೇಂದ್ರ ಯು ಆರ್ ಎಸ್ ಸಂಕಲನ, ಅಕುಲ್, ಜಯ್ ರಾಮ್ ನೃತ್ಯ ನಿರ್ದೇಶನ, ಓಂ ಜಿ ಅವರ ಛಾಯಾಗ್ರಹಣ, ಹಾಗೂ ಥ್ರಿಲ್ಲರ್ ಮಂಜು, ವಿಕ್ರಮ್, ರಿಸ್ಕ್ ಶಿವ ಅವರ ಸಾಹಸ ನಿರ್ದೇಶನವಿದೆ.