ಸೆಪ್ಟೆಂಬರ್ ಎರಡಕ್ಕೆ ಬಿಡುಗಡೆಯಾಗಲಿದೆ ‘ಶಭಾಷ್’ ಚಿತ್ರದ ಲಿರಿಕಲ್ ಹಾಡು

ತನ್ನ ಟೈಟಲ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ರುದ್ರ ಶಿವ ನಿರ್ದೇಶನದ ‘ಶಭಾಷ್’ ಚಿತ್ರದ ಲಿರಿಕಲ್ ಹಾಡು ಇದೇ ಸೆಪ್ಟೆಂಬರ್ ಎರಡಕ್ಕೆ ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರ ತಂಡ ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದೆ.

ಈ ಚಿತ್ರದಲ್ಲಿ ಶರತ್ ಹಾಗೂ ನಿಸರ್ಗ ಗೌಡ ಪ್ರಮುಖ ಪಾತ್ರದಲ್ಲಿದ್ದು, Ace22 ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಪವೀಂದ್ರ ಮುತ್ತಪ್ಪ ನಿರ್ಮಾಣ ಮಾಡಿದ್ದಾರೆ. ಎ ಟಿ ರವೀಶ್ ಸಂಗೀತ ಸಂಯೋಜನೆ ನೀಡಿದ್ದು, ಕೆಎಂ ಪ್ರಕಾಶ್ ಸಂಕಲನ, ನರಸಿಂಹ ಹಾಗೂ ಚಂದ್ರ ಬಂಡೆ ಅವರ ಸಾಹಸ ನಿರ್ದೇಶನ, ನಿರ್ದೇಶಕ ರುದ್ರಶಿವ ಅವರ ಸಂಭಾಷಣೆ, ಮತ್ತು ಶಾಮ್ ರಾವ್ ನಗರ ಗಡ್ಡೆ ಛಾಯಾಗ್ರಾಣವಿದೆ. ಈ ಚಿತ್ರ ಇನ್ನೇನು ಶೀಘ್ರದಲ್ಲೇ ತೆರೆ ಮೇಲೆ ಬರಲಿದ್ದು, ಬಹುತೇಕ ಶೂಟಿಂಗನ್ನು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಶಾಂತಿ ಸಾಗರದಲ್ಲಿ ನೆರವೇರಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read