ರಿಷಿ ಸುನಕ್- ಅಕ್ಷತಾ ಮೂರ್ತಿ ದಂಪತಿಯಿಂದ ಮಹತ್ದದ ಘೋಷಣೆ ; ಗಣಿತ ಕಲಿಕೆ ಉತ್ತೇಜಿಸಲು ಯೋಜನೆ

ಬ್ರಿಟನ್‌ನ ಯುವಜನರಲ್ಲಿ ಗಣಿತದ ಕಲಿಕೆಯನ್ನು ಉತ್ತೇಜಿಸಲು ಮಾಜಿ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಅವರು “ದಿ ರಿಚ್‌ಮಂಡ್ ಪ್ರಾಜೆಕ್ಟ್” ಎಂಬ ಹೊಸ ಶೈಕ್ಷಣಿಕ ಯೋಜನೆಯನ್ನು ಪ್ರಾರಂಭಿಸಿದ್ದಾರೆ. ಲಂಡನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ವಿಷಯವನ್ನು ಘೋಷಿಸಿದ್ದಾರೆ.

ಈ ಯೋಜನೆಯು ಯುವಕರಲ್ಲಿ ಗಣಿತದ ಬಗ್ಗೆ ಆತ್ಮವಿಶ್ವಾಸವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ರಿಷಿ ಸುನಕ್ ಅವರು ಗಣಿತದ ಜ್ಞಾನವು ಜೀವನದಲ್ಲಿ ಯಶಸ್ಸಿಗೆ ಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. “ಗಣಿತದಲ್ಲಿನ ಆತ್ಮವಿಶ್ವಾಸವು ಜೀವನವನ್ನೇ ಬದಲಿಸುತ್ತದೆ. ಇದು ಅವಕಾಶಗಳ ಬಾಗಿಲು ತೆರೆಯುತ್ತದೆ, ಸಾಮಾಜಿಕ ಚಲನಶೀಲತೆಗೆ ಉತ್ತೇಜನ ನೀಡುತ್ತದೆ ಮತ್ತು ಜನರ ಬೆಳವಣಿಗೆಗೆ ನೆರವು ನೀಡುತ್ತದೆ” ಎಂದು ಅವರು ಹೇಳಿದ್ದಾರೆ.

ಈ ಯೋಜನೆಗೆ “ದಿ ರಿಚ್‌ಮಂಡ್ ಪ್ರಾಜೆಕ್ಟ್” ಎಂದು ಹೆಸರಿಸಲಾಗಿದೆ, ಇದು ಸುನಕ್ ಅವರು ಪ್ರತಿನಿಧಿಸುವ ಕ್ಷೇತ್ರದ ಹೆಸರು. ಈ ಯೋಜನೆಯು ಸುನಕ್ ಮತ್ತು ಅಕ್ಷತಾ ಮೂರ್ತಿ ದಂಪತಿಗಳ ಮೊದಲ ಪ್ರಮುಖ ಜಂಟಿ ಯೋಜನೆಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read