ಸೆನ್ಸಾರ್ ಬೋರ್ಡ್‌ನಿಂದ ‘ದಿ ಕೇರಳ ಸ್ಟೋರಿ’ಗೆ ‘ಎ’ ಸರ್ಟಿಫಿಕೇಟ್; ಮಾಜಿ ಸಿಎಂ ಸಂದರ್ಶನ ಸೇರಿದಂತೆ 10 ದೃಶ್ಯಗಳಿಗೆ ಕತ್ತರಿ

ನಿರ್ದೇಶಕ ಸುದೀಪ್ತೊ ಸೇನ್ ಗುಪ್ತಾ ಅವರ ‘ ದಿ ಕೇರಳ ಸ್ಟೋರಿ’ (The Kerala Story) ಟೀಸರ್ ಬಿಡುಗಡೆ ಆಗಿ ಒಂದು ವರ್ಷವೇ ಕಳೆದು ಹೋಗಿದೆ. ಈಗ ಟ್ರೇಲರ್ ಕೂಡ ಬಿಡುಗಡೆಯಾಗಿದೆ. ಅಂದಿನಿಂದ ಈ ಸಿನೆಮಾ ಅನೇಕ ವಿವಾದಗಳಿಗೆ ಗುರಿಯಾಗುತ್ತಲೇ ಇದೆ.

ಮೇ 5ರಂದು ಬಿಡುಗಡೆಯಾಗಲಿರುವ ಈ ಸಿನೆಮಾಗೆ ಸೆನ್ಸಾರ್ ಬೋರ್ಡ್ ಈಗ ‘ಎ’ ಸರ್ಟಿಫಿಕೇಟ್ ಕೊಟ್ಟಿದೆ. ಹಾಗೂ ಸೆನ್ಸಾರ್ ಬೋರ್ಡ್ ಆಫ್ ಫಿಲ್ ಸರ್ಟಿಪಿಕೇಟ್ (CBFC)ಜೊತೆಗೆ ಈ ಸಿನಮಾದಲ್ಲಿ ಬರುವಂತಹ 10 ದೃಶ್ಯಗಳಿಗೆ ಕತ್ತರಿ ಹಾಕಿದೆ. ಅದರಲ್ಲಿ ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದ ಸಂದರ್ಶನ ಕೂಡಾ ಒಂದಾಗಿದೆ. ಇದೇ ಸಿನಿಮಾದ ದೃಶ್ಯವೊಂದರಲ್ಲಿ ಸಚಿವರೊಬ್ಬರು ಕೇರಳವನ್ನು ಮುಸ್ಲಿಂ ಬಾಹುಳ್ಯದ ಕ್ಷೇತ್ರವನ್ನಾಗಿ ಮಾಡುತ್ತೇವೆ ಎಂದು ಹೇಳಿದ ಸಂಭಾಷಣೆಗಳನ್ನು ಸಹ ತೆಗೆದು ಹಾಕಲಾಗಿದೆ.

ಸಿನಿಮಾದ ಟ್ರೈಲರ್‌ನಲ್ಲಿ ಕೇರಳದ 32,000 ಯುವತಿಯರನ್ನು ಮತಾಂತರ ಮಾಡಲಾಗಿದೆ ಎಂಬ ಸಂಭಾಷಣೆ ಹಾಗೂ ಟೆಕ್ಸ್ಟ್ ಇದೆ. ಇದರ ಬಗ್ಗೆ ತೀವ್ರ ತಕರಾರು ಎದ್ದಿದ್ದು, ಮುಸ್ಲಿಂ ಯೂಥ್ ಲೀಗ್ ಸಂಘಟನೆಯು ಕೇರಳದ 32,000 ಯುವತಿಯರು ಐಎಸ್ ಸೇರಿದ್ದಾರೆ ಎಂಬುದನ್ನು ಸಾಬೀತುಪಡಿಸಿದರೆ 1 ಕೋಟಿ ಬಹುಮಾನ ನೀಡುತ್ತೇವೆ ಎಂದು ನಿರ್ದೇಶಕ ಸುದಿಪ್ತೋ ಸೇನ್ ಗೆ ಸವಾಲು ಎಸೆದಿದೆ.

‘ದಿ ಕೇರಳ ಸ್ಟೋರಿ’ ನೈಜ ಘಟನೆ ಆಧಾರಿತವಾಗಿದ್ದು ಎಂದು ನಿರ್ದೇಶಕರು ಹೇಳಿದ್ದಾರೆ 2022ರಲ್ಲಿ ರಿಲೀಸ್ ಆದ ‘ದಿ ಕಾಶ್ಮೀರ್ ಫೈಲ್’ ಸಿನಿಮಾ ಹಿಟ್ ಆಯಿತು. ಕಾಶ್ಮೀರಿ ಪಂಡಿತರ ವಲಸೆ ಮತ್ತು ಅವರ ಹತ್ಯೆಯನ್ನು ಆಧರಿಸಿ ಈ ಸಿನಿಮಾ ಸಿದ್ಧಗೊಂಡಿತ್ತು. ಈಗ ಮತ್ತೊಂದು ನೈಜ ಘಟನೆ ಆಧಾರಿತ ಸಿನಿಮಾ ಬರುತ್ತಿದ್ದು ಇದನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ

https://twitter.com/ShashiTharoor/status/1652910754256023553?ref_src=twsrc%5Etfw%7Ctwcamp%5Etweetembed%7Ctwterm%5E1652910754256023553%7Ctwgr%5E52f60cc5369026398bb4a102e9855893e2424774%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fabplive-epaper-dh7e8ed9a840a34a2e9316137468a5ca4c%2Fthekeralastorygetsacertificate10scenesdeletedincludinginterviewwithexcm-newsid-n495663008

https://twitter.com/ShashiTharoor/status/1652951532655230976?ref_src=twsrc%5Etfw%7Ctwcamp%5Etweetembed%7Ctwterm%5E1652951532655230976%7Ctwgr%5E52f60cc5369026398bb4a102e9855893e2424774%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fabplive-epaper-dh7e8ed9a840a34a2e9316137468a5ca4c%2Fthekeralastorygetsacertificate10scenesdeletedincludinginterviewwithexcm-newsid-n495663008

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read