ಭಾರತೀಯರು ಜುಗಾಡ್ಗೆ ಸಮಾನಾರ್ಥಕ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಮನೆಯಲ್ಲಿಯೇ ಹಲವು ವಿಧವಾದ ತಂತ್ರಜ್ಞಾನ ಅಳವಡಿಸಿಕೊಂಡು ಅಸಾಧ್ಯ ಎನ್ನುವುದನ್ನೂ ಮಾಡುತ್ತಾರೆ. ಅಂಥದ್ದೇ ಒಂದು ದೇಸಿ ಜುಗಾಡ್ ಈಗ ವೈರಲ್ ಆಗಿದೆ.
ನಾವು ಚಿಕ್ಕವರಿದ್ದಾಗ ಮಸಾಲೆ ಮತ್ತು ಕಾಳುಗಳನ್ನು ಪುಡಿ ಮಾಡಲು “ಬೀಸುವ ಕಲ್ಲು” ಬಳಸುತ್ತಿದು ನಿಮಗೆ ನೆನಪಿದೆಯೇ? ಗ್ರಾಮೀಣ ಪ್ರದೇಶಗಳಲ್ಲಿ ಕೆಲವು ಕಡೆಗಳಲ್ಲಿ ಇದು ಇಂದಿಗೂ ಲಭ್ಯ. ಆದರೆ ಮಿಕ್ಸಿ, ಗ್ರ್ಯಾಂಡರ್ ಬಂದ ಮೇಲೆ ಎಲ್ಲವೂ ಮರೆಯಾಗಿದೆ. ಆದರೆ ಈಗ ವ್ಯಕ್ತಿಯೊಬ್ಬರು ತಯಾರಿಸಿರುವ ಜುಗಾಡ್ ಗ್ರ್ಯಾಂಡರ್ ಈಗ ವೈರಲ್ ಆಗಿದೆ.
ಈಗ ವೈರಲ್ ಆಗಿರುವ ವೀಡಿಯೊದಲ್ಲಿ ಕಡಿಯಲು ಬಳಸುತ್ತಿರುವ ಕಲ್ಲನ್ನು ಇಡಲಾಗಿದೆ. ಇದಕ್ಕೆ ಮಧ್ಯದಲ್ಲಿ ಬಾಟಲಿ ಜೋಡಿಸಲಾಗಿದೆ. ಅದನ್ನು ತಿರುಗಿಸಲು ಎರಡು ಗಟ್ಟಿಮುಟ್ಟಾದ ಪೈಪ್‌ಗಳೊಂದಿಗೆ ಮೋಟಾರ್ ಜೋಡಿಸಲಾಗಿದೆ. ಅಲ್ಲದೆ, ಸಾಂಪ್ರದಾಯಿಕ ಬೀಸುವ ಕಲ್ಲುಗಳನ್ನು ಕೈಯಾರೆ ತಿರುಗಿಸಲು ಹ್ಯಾಂಡಲ್ ಇಟ್ಟಿರುವುದನ್ನು ನೋಡಬಹುದು.
ಪೈಪ್ ತಿರುಗಿದಂತೆ ಹಿಟ್ಟು ಕೆಳಕ್ಕೆ ಇಡುವ ಪಾತ್ರೆಗೆ ಬೀಳುವ ವಿಡಿಯೋ ಇದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗಿದೆ.
https://twitter.com/harichandanaias/status/1628420421895983104?ref_src=twsrc%5Etfw%7Ctwcamp%5Etweetembed%7Ctwterm%5E1628420421895983104%7Ctwgr%5Eb0f575821a21f96020478f95c24b6935f34309ed%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthe-internet-is-bowled-over-by-the-concept-of-this-jugaadu-chakki-have-you-seen-viral-video-2338625-2023-02-23
https://twitter.com/srinii1208/status/1628635624445210624?ref_src=twsrc%5Etfw%7Ctwcamp%5Etweetembed%7Ctwterm%5E1628635624445210624%7Ctwgr%5Eb0f575821a21f96020478f95c24b6935f34309ed%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthe-internet-is-bowled-over-by-the-concept-of-this-jugaadu-chakki-have-you-seen-viral-video-2338625-2023-02-23
https://twitter.com/VarkalaB/status/1628429183440539648?ref_src=twsrc%5Etfw%7Ctwcamp%5Etweetembed%7Ctwterm%5E1628429183440539648%7Ctwgr%5Eb0f575821a21f96020478f95c24b6935f34309ed%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthe-internet-is-bowled-over-by-the-concept-of-this-jugaadu-chakki-have-you-seen-viral-video-2338625-2023-02-23