ರಾಜ್ಯದಲ್ಲಿ ʼಕಾಫ್ ಸಿರಫ್ʼ ಬಳಕೆ ಬಗ್ಗೆ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ, ಈ ನಿಯಮಗಳ ಪಾಲನೆ ಕಡ್ಡಾಯ

ಬೆಂಗಳೂರು : ʼಕಾಫ್ ಸಿರಫ್ʼ ಬಳಕೆ ಬಗ್ಗೆ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟಿಸಲಾಗಿದೆ. ಮಕ್ಕಳ ಸುರಕ್ಷತೆಯನ್ನು ಕಾಪಾಡಲು ಪೋಷಕರು ಹಾಗೂ ಆರೈಕೆದಾರರು, ಸಾರ್ವಜನಿಕರು ಸರ್ಕಾರದ ಮಾರ್ಗಸೂಚಿಯನ್ನು ಪಾಲನೆ ಮಾಡಬೇಕು ಎಂದು ಸೂಚನೆ ನೀಡಿದೆ.

ಈ ನಿಯಮಗಳ ಪಾಲನೆ ಕಡ್ಡಾಯ
1) 02 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಮ್ಮಿನ ಅಥವಾ ಶೀತದ ಸಿರಪ್ ನೀಡಬಾರದು.
2) 2 ರಿಂದ 5 ವರ್ಷಗಳ ವಯಸ್ಸಿನ ಮಕ್ಕಳಿಗೆ ಸರಿಯಾದ ವೈದ್ಯಕೀಯ ಪರೀಕ್ಷೆಯ ನಂತರ ತಜ್ಞ ವೈದ್ಯರ ನಿರ್ದಿಷ್ಟ ಸಲಹೆ ಮೇರೆಗೆ ಮಾತ್ರ ಈ ಔಷಧಗಳನ್ನು ನೀಡಬೇಕು.
3) 5 ವರ್ಷ ದಾಟಿದ ಮಕ್ಕಳಿಗೆ ವೈದ್ಯರ ಸಲಹೆಯಂತೆ ಸಿರಪ್ ಬಳಸಬೇಕು.
4) ಸಾಧ್ಯವಾದಷ್ಟೂ ಕಡಿಮೆ ಅವಧಿಗೆ ಕನಿಷ್ಠ ಡೋಸ್ಗಳನ್ನು ಬಳಸಬೇಕು.
5) ಬಹು ಔಷಧಗಳ ಸಂಯೋಜನೆ ಇರುವ ಸಿರಪ್ಗಳನ್ನು ಬಳಸಬಾರದು.
6) ಮಕ್ಕಳಿಗೆ ಸ್ವಯಂ ಔಷಧೋಪಚಾರ ಮಾಡಬಾರದು.
7) ವೈದ್ಯರ ಸೂಚನೆ ಇಲ್ಲದೇ ಕೆಮ್ಮಿನ ಔಷಧಿ ಖರೀದಿಸಬಾರದು, ಬಳಸಬಾರದು.
8) ಈ ಹಿಂದೆ ಬಳಸಿ ಉಳಿದ ಔಷಧಿಯನ್ನು ಮತ್ತೆ ಬಳಸಬಾರದು.
9) ವೈದ್ಯರಲ್ಲದವರು ಶಿಫಾರಸ್ಸು ಮಾಡಿದ ಔಷಧವನ್ನು ಬಳಸಬಾರದು.
10) ಅವಧಿ ಮುಗಿದ ಔಷಧವನ್ನು ತೆಗೆದುಕೊಳ್ಳಬಾರದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read