ಇಬ್ಬರ ಬಾಳಲ್ಲಿ ಪ್ರೀತಿ ಆಟವಾಡಿದ ಹುಡುಗಿ: ಒಬ್ಬನ ಹತ್ಯೆ, ಇನ್ನೊಬ್ಬ ಜೈಲುಪಾಲು

ಹುಡುಗಿ ಚೆಲ್ಲಾಟಕ್ಕೆ ಇಬ್ಬರು ಹುಡುಗರ ಬಾಳು ಹಾಳಾಗಿದೆ. ಒಬ್ಬ ಕೊಲೆಯಾದ್ರೆ ಇನ್ನೊಬ್ಬ ಜೈಲು ಸೇರಿದ್ದಾನೆ. ಈ ಘಟನೆ ನಡೆದಿರೋದು ಜಾರ್ಖಂಡದಲ್ಲಿ. ತಾನು ಪ್ರೀತಿಸಿ ಮದುವೆ ಆಗ್ಬೇಕಿದ್ದ ಹುಡುಗಿಯನ್ನು ಸಹೋದರ ಸಂಬಂಧಿ ಪ್ರೀತಿಸುತ್ತಿದ್ದಾನೆ ಎಂಬುದನ್ನು ತಿಳಿದ ವ್ಯಕ್ತಿ, ಸಹೋದರ ಸಂಬಂಧಿಯ ಹತ್ಯೆ ಮಾಡಿ ಈಗ ಜೈಲು ಸೇರಿದ್ದಾನೆ.

ಗೋಮಿಯಾದ ಕಥಾರಾ ಒಪಿ ಪ್ರದೇಶದ ಜಿರ್ಕಿ ಗ್ರಾಮದಲ್ಲಿ ಈ ಕೊಲೆ ನಡೆದಿದೆ. ಸೋದರ ಸಂಬಂಧಿ ವಿನೋದ್ ತನ್ನ ಸಂಬಂಧಿ ಮನೀಶ್ ನನ್ನು ಕೊಂದಿದ್ದಾನೆ. ಪೊಲೀಸರ ಪ್ರಕಾರ, ವಿನೋದ್ ಕಳೆದ 5 ವರ್ಷಗಳಿಂದ ಹುಡುಗಿಯನ್ನು ಪ್ರೀತಿಸುತ್ತಿದ್ದ. ಮದುವೆ ನಿಶ್ಚಯವಾಗಿತ್ತು. ಕೆಲ ದಿನಗಳಿಂದ ವಿನೋದ್‌ಗೆ ಹುಡುಗಿ ಮೇಲೆ ಅನುಮಾನ ಬಂದಿತ್ತು. ಹುಡುಗಿ ಕಾಲ್‌ ಲೀಸ್ಟ್‌ ನೋಡಿದಾಗ ಬೆಚ್ಚಿಬಿದ್ದಿದ್ದ. ಹುಡುಗಿ ಆತನ ಸಹೋದರ ಸಂಬಂಧಿ ಮನೀಶ್‌ ಜೊತೆ ಮಾತನಾಡೋದು ಪತ್ತೆಯಾಗಿತ್ತು.

ಇದು ವಿನೋದ್‌ ಕೋಪಕ್ಕೆ ಕಾರಣವಾಯ್ತು. ಮನೀಶ್‌ನನ್ನು ಕೊಲ್ಲಲು ಪ್ಲಾನ್‌ ಮಾಡಿದ ವಿನೋದ್‌, ಮನೀಶ್‌ ಮನೆಗೆ ನುಗ್ಗಿ ಹತ್ಯೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ. ಕೊಲೆ ನಡೆಯುವ ಸಮಯದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ. ‌ಹತ್ಯೆ ಖಂಡಿಸಿ ಗ್ರಾಮದಲ್ಲಿ ಪ್ರತಿಭಟನೆ ನಡೆದಿತ್ತು. ವಿಚಾರಣೆ ಕೈಗೊಂಡ ಪೊಲೀಸರು 24 ಗಂಟೆಯಲ್ಲಿ ಆರೋಪಿ ವಿನೋದ್‌ ನನ್ನು ಬಂಧಿಸಿದ್ದಾರೆ. ಆರಂಭದಲ್ಲಿ ಅಪರಾಧ ಒಪ್ಪಿಕೊಳ್ಳದ ವಿನೋದ್‌, ನಂತ್ರ ಸತ್ಯ ಬಾಯ್ಬಿಟ್ಟಿದ್ದಾನೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read