“ಭಾರತದ ಸಂಸ್ಕೃತಿ ಅಡಿಪಾಯವೇ ಮಠಮಾನ್ಯಗಳ ಪರಂಪರೆ” : ಬಾಳೆಹೊನ್ನೂರಿನಲ್ಲಿ ಬಿ.ವೈ ವಿಜಯೇಂದ್ರ ಹೇಳಿಕೆ

ಬಾಳೆಹೊನ್ನೂರು : ರಂಭಾಪುರಿ ಮಠದ ಜಗದ್ಗುರು ಶ್ರೀ ಶ್ರೀ ಶ್ರೀ ಡಾ| ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾ ರಥೋತ್ಸವ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಬಿ.ವೈ ವಿಜಯೇಂದ್ರ ಭಾಗವಹಿಸಿದರು.

ಭಾರತದ ಸಂಸ್ಕೃತಿ ಪರಂಪರೆಯ ಅಡಿಪಾಯವೆಂದರೆ ನಮ್ಮ ಉತ್ಸವಗಳು, ಹಬ್ಬಗಳು, ಆಚಾರ- ವಿಚಾರಗಳು ಹಾಗೂ ಈ ಸಂಬಂಧವಾಗಿ ನಡೆಯುವ ಜಾತ್ರೆಗಳು, ಆಧುನಿಕ ತಂತ್ರಜ್ಞಾನಗಳ ಹೊಡೆತದ ನಡುವೆಯೂ ಇವೆಲ್ಲವೂ ಉಳಿದು-ಬೆಳೆದು ಬರುತ್ತಿರುವುದು ನಮ್ಮ ಪರಂಪರೆಗಿರುವ ಗಟ್ಟಿತನವನ್ನು ತೋರುತ್ತದೆ. ಬಹುಶಃ ಈ ಗಟ್ಟಿತನದ ಬೆನ್ನೆಲುಬಾಗಿ ನಿಂತಿರುವುದೇ ನಮ್ಮ ಮಠಮಾನ್ಯಗಳು. ನಮ್ಮ ಮಠಮಾನ್ಯಗಳು ಇಲ್ಲದಿದ್ದರೆ ನಮ್ಮ ಸಂಸ್ಕೃತಿ ಎಂದೋ ಅವಸಾನದ ಹಾದಿ ಹಿಡಿಯುತ್ತಿತ್ತು. ಆದರೆ ನಮ್ಮ ಸಂಸ್ಕೃತಿಯ ನಿರ್ವಹಿಸುತ್ತಿರುವುದರಿಂದಲೇ ಇಂದು ಭಾರತ, ಭಾರತವಾಗಿ ಬೇರುಗಳಂತೆ ಮಠಗಳು ಕಾಯಕ ಉಳಿಯಲು ಸಾಧ್ಯವಾಗಿದೆ ಎಂದರು.
ಈ ಹಿನ್ನಲೆಯಲ್ಲಿ ರಂಭಾಪುರಿ ಮಹಾಸಂಸ್ಥಾನದ ಬಹುದೊಡ್ಡ ಕೊಡುಗೆಯನ್ನು ಸ್ಮರಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಮಠಗಳ ಪರಮಪೂಜ್ಯ ಶ್ರೀಗಳು, ಹರಗುರು ಚರಮೂರ್ತಿಗಳು, ಮಾಜಿ ಶಾಸಕರಾದ ಶ್ರೀ ಜೀವರಾಜ್, ರಾಜ್ಯ ಕಾರ್ಯದರ್ಶಿ ಶ್ರೀ ಶರಣು ತಳ್ಳೀಕೇರಿ, ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕಲ್ಮರುಡಪ್ಪ, ಹಾಸನ ಜಿಲ್ಲಾಧ್ಯಕ್ಷರಾದ ಶ್ರೀ ಸಿದ್ದೇಶ್ ನಾಗೇಂದ್ರ, ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ಶ್ರೀ ದೇವರಾಜ್ ಶೆಟ್ಟಿ, ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಶ್ರೀಮಠದ ಭಕ್ತಾದಿಗಳು ಉಪಸ್ಥಿತರಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read