ಮೋಹನ್ ಎನ್ ಮುನಿ ನಾರಾಯಣಪ್ಪ ರಚಿಸಿ ನಿರ್ದೇಶಿಸಿರುವ ‘ಡಾಲರ್ಸ್ ಪೇಟೆ’ ಚಿತ್ರ ತನ್ನ ಟೈಟಲ್ ಮೂಲಕವೇ ಸಾಕಷ್ಟು ಕುತೂಹಲ ಮೂಡಿಸಿದ್ದು, ಟೀಸರ್ ನಿಂದಲೇ ಭರ್ಜರಿ ಸೌಂಡ್ ಮಾಡಿದೆ. ಸೆಪ್ಟೆಂಬರ್ ತಿಂಗಳಲ್ಲಿ ಸಿನಿಮಾ ಬಿಡುಗಡೆ ಮಾಡುವುದಾಗಿ ತಿಳಿಸಿದ್ದ ಡಾಲರ್ಸ್ ಪೇಟೆ ಚಿತ್ರತಂಡ ಇದೀಗ ದಿನಾಂಕವನ್ನು ಸ್ಪಷ್ಟಪಡಿಸಿದೆ. ಸೆಪ್ಟೆಂಬರ್ ಆರರಂದು ಈ ಸಿನಿಮಾ ರಾಜ್ಯಾದ್ಯಂತ ತೆರೆ ಕಾಣಲಿದೆ.
ಈ ಚಿತ್ರವನ್ನು ಪೆಂಟ್ರಿಕ್ಸ್ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ಪೂಜಾ t.y ನಿರ್ಮಾಣ ಮಾಡಿದ್ದು, ಸೌಮ್ಯ ಜಗನ್ಮೂರ್ತಿ ಸೇರಿದಂತೆ ವೆಂಕಟ್ ರಾಜ್, ಆಕರ್ಷ್ ಕಮಲ, ಕುಶಾಲ್ಸ್, ಕುಶಾಲ್ಸ್ ಗೌಡ, ಮಹೇಂದ್ರ ಪ್ರಸಾದ್, ರಘು ರಾಮನಕೊಪ್ಪ, ಹೊನ್ನವಳ್ಳಿ ಕೃಷ್ಣ, ಹುಲಿ ಕಾರ್ತಿಕ್, ದತ್ತು ಬಣಕಾರ್, ಜಿನಿತ್, ಪ್ರತಿಮಾ ಟಿ, ಲೋಕೇಶ್ ಪ್ರಕಾಶ್, ಲೋಕೇಶ್ ಸುಕುಮಾರ್, ವಿಶ್ವ ವಿಖ್ಯಾತ್, ಬಸು ಹಿರೇಮಟ್, ಜೋತೀಶ್ ಶೆಟ್ಟಿ, ತೇಜೇಶ್ ಬಿ.ಕೆ, ಸುನೀಲ್, ಮಂಜುನಾಥ್ ಅಣ್ಣಯಪ್ಪ, ಪ್ರಥ್ವಿ, ಪರಶಿವ ಮೂರ್ತಿ, ಪ್ರದೀಪ್ ಚಂದರ್, ಅಶೋಕ್ ಚಕ್ರವರ್ತಿ ತಾರಾ ಬಳಗದಲ್ಲಿದ್ದಾರೆ. ಪೃಥ್ವಿ ಅಂಬಾರ್ ಅತಿಥಿ ಪಾತ್ರ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಹೇಶ್ ತೊಗಟ ಸಂಕಲನ, ಆನಂದ್ ಸುಂದರೇಶ ಛಾಯಾಗ್ರಹಣ, ಹಾಗೂ ಅರ್ಜುನ್ ರಾಜ್ ಮತ್ತು ನರಸಿಂಹ ಅವರ ಸಾಹಸ ನಿರ್ದೇಶನವಿದೆ. ಸೂರಜ್ ಜೋಯಿಸ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.