ಹಳ್ಳ ಹಿಡಿದ ‘ಬ್ರ್ಯಾಂಡ್ ಬೆಂಗಳೂರು’ ಯೋಜನೆ, ಸಿಲಿಕಾನ್ ಸಿಟಿ ಗುಂಡಿಗಳ ನಗರ : ಬಿಜೆಪಿ ವಾಗ್ಧಾಳಿ

ಬೆಂಗಳೂರು : ಬಯಲಾಯ್ತು ಮುಖವಾಡ, ಬೀದಿಗೆ ಬಂತು ಬಂಡವಾಳ. ನಗರ ಯೋಜನೆಯ ಕಲ್ಪನೆಯೇ ಇಲ್ಲದೆ ಹಾಗೂ ದೂರದೃಷ್ಟಿ ಕೊರತೆಯಿಂದ ಬಳಲುತ್ತಿರುವ ಕಾಂಗ್ರೆಸ್   ಸರ್ಕಾರದ ಬ್ರ್ಯಾಂಡ್ ಬೆಂಗಳೂರು ಯೋಜನೆ ರೂಪುಗೊಂಡ ಆರು ತಿಂಗಳ ಒಳಗೆ ಹಳ್ಳ ಹಿಡಿದಿದೆ ಎಂದು ಬಿಜೆಪಿ ಟ್ವೀಟ್ ಮೂಲಕ ವಾಗ್ಧಾಳಿ ನಡೆಸಿದೆ.

ಅನುದಾನ ಹಾಗೂ ಮೇಲುಸ್ತುವಾರಿ ಕೊರತೆಯಿಂದ ಬಳಲುತ್ತಿರುವ ಬ್ರ್ಯಾಂಡ್ ಬೆಂಗಳೂರು ಯೋಜನೆ ಈಗ ನೇಪಥ್ಯಕ್ಕೆ ಸರಿದಿದೆ ಎಂದು ಬಿಜೆಪಿ  ವಾಗ್ಧಾಳಿ ನಡೆಸಿದೆ.

ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ಮಹಾನಗರ ಅಭಿವೃದ್ಧಿಗೆ ನೀಡಬೇಕಾದಷ್ಟು ಆರ್ಥಿಕ ನೆರವು ನೀಡಿಲ್ಲ. ಇದರಿಂದ ಸಿಲಿಕಾನ್ ಸಿಟಿ ತಗ್ಗು ಗುಂಡಿಗಳ ನಗರವಾಗಿ ಮಾರ್ಪಟ್ಟಿದೆ. ಇದರ ಕೀರ್ತಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ಅವರಿಗೂ ಸಲ್ಲಬೇಕು. ಹೊಸ ಹೊಸ ಯೋಜನೆಗಳನ್ನು ಘೋಷಣೆ ಮಾಡುವುದು, ಬಳಿಕ ಮೈಮರೆಯುವುದು ಕಾಂಗ್ರೆಸ್ ಸರ್ಕಾರಕ್ಕೆ ಹೊಸದಲ್ಲ. ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಕಾರ್ಯಕ್ರಮ ರೂಪಿಸಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆಶಿ ಅವರೇ, ಮಳೆಯಿಂದಾಗಿ ಬೆಂಗಳೂರಿನ ಹಲವು ನಿವಾಸಿಗಳ ಮನೆ ಬಾಗಿಲಿಗೆ ಚರಂಡಿ ನೀರು ಬಂದಿದೆ. ಮೊದಲು ಬೆಂಗಳೂರಿಗರ ಸಮಸ್ಯೆ ಬಗೆಹರಿಸಿ ಕೃತಾರ್ಥರಾಗಿ ಎಂದು   ಬಿಜೆಪಿ  ವಾಗ್ಧಾಳಿ ನಡೆಸಿದೆ.

https://twitter.com/BJP4Karnataka/status/1792820830373925092

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read