ವೈರಲ್ ಆಯ್ತು ಬೊಮ್ಮನ್‌ ಮತ್ತು ರಘುರ 5 ವರ್ಷಗಳ ಹಳೆಯ ಚಿತ್ರ

95ನೇ ಅಕಾಡೆಮಿ ಪ್ರಶಸ್ತಿಗಳ ಸಮಾರಂಭದಲ್ಲಿ ಆಸ್ಕರ್‌ ಗೌರವಕ್ಕೆ ಪಾತ್ರವಾದ ’ಆರ್‌ಆರ್‌ಆರ್‌’ ಹಾಗೂ ’ದಿ ಎಲಿಫೆಂಟ್ ವಿಸ್ಪರರರ್ಸ್’ ಚಿತ್ರಗಳು ಇದೀಗ ಎಲ್ಲೆಲ್ಲೂ ಸದ್ದು ಮಾಡಿವೆ. ಕಾರ್ತಿಕಿ ಗೊನ್ಲಾಲ್ವ್ಸ್‌ರ ’ದಿ ಎಲಿಫೆಂಟ್ ವಿಸ್ಪರರರ್ಸ್’ ಚಿತ್ರವು ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ ಎಂಬ ಗೌರವಕ್ಕೆ ಭಾಜನವಾಗಿದೆ.

ಅನಾಥ ಆನೆ ’ರಘು’ನನ್ನ ತಮ್ಮದೇ ಮಗುವಿನಂತೆ ಸಾಕಿ ಸಲಹುವ ಬೊಮ್ಮನ್ ಹಾಗೂ ಬೆಲ್ಲಿಯ ಜೀವನಗಾಥೆಯನ್ನು ಈ ಸಾಕ್ಷ್ಯಚಿತ್ರ ಒಳಗೊಂಡಿದೆ.

ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್ ಕಸ್ವನ್ ಈ ಜೋಡಿಯ ಥ್ರೋಬ್ಯಾಕ್ ಚಿತ್ರವೊಂದನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದಾರೆ. “ಮುದುಮಲೈನಲ್ಲಿ ನಾನು ಐದು ವರ್ಷಗಳ ಹಿಂದೆ ಸೆರೆ ಹಿಡಿದ ಚಿತ್ರ. ನಿಮಗೆ ಯಾರೆಂದು ಗುರುತು ಸಿಕ್ಕಿತೇ?” ಎಂದು ಕ್ಯಾಪ್ಷನ್ ಕೊಟ್ಟು ರಘು ಮತ್ತು ಬೊಮ್ಮನ್‌ರ ಚಿತ್ರವನ್ನು ಶೇರ್‌ ಮಾಡಿದ್ದಾರೆ ಕಸ್ವನ್.

“ನೀವು ಏನಾದರೂ ಆಗಬಹುದಾದ ಈ ಜಗತ್ತಿನಲ್ಲಿ, ಎಲ್ಲರ ಮೇಲೂ ದಯೆ ಇರಲಿ,” ಎಂದು ಕ್ಯಾಪ್ಷನ್ ಕೊಟ್ಟು ಐದು ವರ್ಷಗಳ ಹಿಂದೆ ಪೋಸ್ಟ್ ಮಾಡಿದ್ದ ತಮ್ಮದೇ ಟ್ವೀಟ್‌ ಅನ್ನು ಈಗ ಮತ್ತೊಮ್ಮೆ ಶೇರ್‌ ಮಾಡಿದ್ದಾರೆ ಕಸ್ವನ್.

https://twitter.com/ParveenKaswan/status/1640936985379606528?ref_src=twsrc%5Etfw%7Ctwcamp%5Etweetembed%7Ctwterm%5E1640936985379606528%7Ctwgr%5Eed57f3ab9b8333300af0b85d2a6fae527cdb3759%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthe-elephant-whisperers-bomman-and-raghu-together-in-a-5-year-old-pic-dont-miss-2353393-2023-03-30

https://twitter.com/ParveenKaswan/status/1640938442942222337?ref_src=twsrc%5Etfw%7Ctwcamp%5Etweetembed%7Ctwterm%5E1640938442942222337%7Ctwgr%5Eed57f3ab9b8333300af0b85d2a6fae527cdb3759%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthe-elephant-whisperers-bomman-and-raghu-together-in-a-5-year-old-pic-dont-miss-2353393-2023-03-30

https://twitter.com/Aesh14Kesar/status/1641118754305081345?ref_src=twsrc%5Etfw%7Ctwcamp%5Etweetembed%7Ctwterm%5E1641118754305081345%7Ctwgr%5Eed57f3ab9b8333300af0b85d2a6fae527cdb3759%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthe-elephant-whisperers-bomman-and-raghu-together-in-a-5-year-old-pic-dont-miss-2353393-2023-03-30

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read