‘ಚುನಾವಣಾ ಆಯೋಗ’ ಎಂಬ ಕುಂಬಳಕಾಯಿ ಕಳ್ಳ ಹೆಗಲನ್ನಷ್ಟೇ ಅಲ್ಲ ಮೈಯೆಲ್ಲಾ ತಡವಿಕೊಳ್ಳುತ್ತಿದೆ : ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು : ಚುನಾವಣಾ ಆಯೋಗ ಎಂಬ ಕುಂಬಳಕಾಯಿ ಕಳ್ಳ ಹೆಗಲನ್ನಷ್ಟೇ ಅಲ್ಲ ಮೈಯೆಲ್ಲಾ ತಡವಿಕೊಳ್ಳುತ್ತಿದೆ! ಎಂದು ಸಚಿವ ಪ್ರಿಯಾಂ‍ಕ್ ಖರ್ಗೆ ಹೇಳಿದ್ದಾರೆ. ಈ ಬಗ್ಗೆ ಎಕ್ಸ್ ಪೋಸ್ಟ್ ನಲ್ಲಿ ಮಾಡಿದ ಅವರು ಚುನಾವಣಾ ಆಯೋಗವು ಪಾರದರ್ಶಕತೆಯಿಂದ ಪಲಾಯನ ಮಾಡುತ್ತಿರುವುದೇಕೆ? ಲೋಪಗಳೇ ಆಗಿಲ್ಲ ಎಂದಾದರೆ ಈ ಕಳ್ಳಾಟ ಏಕೆ? ಎಂದಿದ್ದಾರೆ.

ನಿನ್ನೆ ರಾಹುಲ್ ಗಾಂಧಿ ಅವರು ಮತಗಳ್ಳತನವನ್ನು ಸಾಕ್ಷಿ ಸಮೇತ ಬಹಿರಂಗಗೊಳಿಸಿದ್ದೇ ತಡ ಹಲವು ರಾಜ್ಯಗಳ ಚುನಾವಣಾ ಆಯೋಗದ ವೆಬ್ಸೈಟ್ ಗಳು ಕೆಲ ಹೊತ್ತು ಬೀಗ ಹಾಕಿಕೊಂಡು ಕುಳಿತಿದ್ದವು. ಕರ್ನಾಟಕದ ಚುನಾವಣಾ ಆಯೋಗದ ವೆಬ್ಸೈಟ್ ನಲ್ಲಿ 2024ರ ಮಹದೇವಪುರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ಡೌನ್ಲೋಡ್ ಆಗದಂತೆ ತಾಂತ್ರಿಕ ಕುತಂತ್ರ ಮಾಡಲಾಗಿದೆ! ಚುನಾವಣಾ ಆಯೋಗವು ಮತಗಳ್ಳತನದ ಸಾಕ್ಷಿ ನಾಶಕ್ಕೆ ಮುಂದಾಗಿದೆಯೇ? ಜನತೆಗೆ ತನ್ನ ಕಳ್ಳತನ ತಿಳಿಯದಂತೆ ಮಾಡಲು ಸಾಹಸ ಮಾಡುತ್ತಿದೆಯೇ? ಈ ಕುತಂತ್ರಗಾರಿಕೆಗೆ ಯಾರ ನಿರ್ದೇಶನವಿದೆ? ಚುನಾವಣಾ ಆಯೋಗವು ಪಾರದರ್ಶಕತೆಯಿಂದ ಪಲಾಯನ ಮಾಡುತ್ತಿರುವುದೇಕೆ? ಲೋಪಗಳೇ ಆಗಿಲ್ಲ ಎಂದಾದರೆ ಈ ಕಳ್ಳಾಟ ಏಕೆ? ಎಂದು ಕಿಡಿಕಾರಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read