WATCH VIDEO : ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ನೀರಿನ ಟ್ಯಾಂಕರ್ ಹರಿಸಿ ಹತ್ಯೆ ; ಶಾಕಿಂಗ್ ದೃಶ್ಯ ಸೆರೆ

ನವದೆಹಲಿ : ನೀರು ಚಿಮುಕಿಸುವ ಗಲಾಟೆಯು ಯುವಕನ ದುರಂತ ಸಾವಿಗೆ ಕಾರಣವಾಯಿತು. ಬೇಕಂತಲೇ ಯುವಕನ ಮೇಲೆ ಚಾಲಕ ನೀರಿನ ಟ್ಯಾಂಕರ್ ಹರಿಸಿದ್ದು, ಬೆಚ್ಚಿ ಬೀಳಿಸುವ ದೃಶ್ಯ ಸೆರೆಯಾಗಿದೆ.

ಕ್ಷುಲ್ಲಕ ಕಾರಣಕ್ಕೆ ಟ್ಯಾಂಕರ್ ಚಾಲಕ ಹಾಗೂ ಯುವಕನ ನಡುವೆ ಜಗಳ ನಡೆದಿದ್ದು, ನೀರಿನ ಟ್ಯಾಂಕರ್ ಚಾಲಕ ಯುವಕನ ಮೇಲೆ ಟ್ಯಾಂಕರ್ ಹರಿಸಿ ಕೊಂದಿದ್ದಾನೆ.

ಘಟನೆ ಹಿನ್ನೆಲೆ

ಸಂಗಮ್ ವಿಹಾರ್ ಪ್ರದೇಶದಲ್ಲಿ ಆಟೋರಿಕ್ಷಾ ಕೆಟ್ಟುಹೋಗಿದ್ದು, ಯುವಕರ ಗುಂಪು ಒಟ್ಟುಗೂಡಿ ಆಟೋ ರಿಪೇರಿ ಮಾಡುತ್ತಿದ್ದರು. ಈ ವೇಳೆ ನೀರಿನ ಟ್ಯಾಂಕರ್ ಹಾದು ಹೋಗಿದೆ. ಭಾರಿ ಮಳೆ ಮತ್ತು ರಸ್ತೆಗಳು ಜಲಾವೃತಗೊಂಡಿದ್ದರಿಂದ ಆಟೋ ರಿಪೇರಿ ಮಾಡುತ್ತಿದ್ದ ಗುಂಪಿನ ಮೇಲೆ ನೀರು ಚಿಮ್ಮಿತು. ಈ ಸಣ್ಣ ಘಟನೆಯು ತ್ವರಿತವಾಗಿ ಹಿಂಸಾಚಾರಕ್ಕೆ ತಿರುಗಿತು, ನಂತರ ಯುವಕರು ನೀರಿನ ಟ್ಯಾಂಕರ್ ಚಾಲನೆ ಮಾಡುತ್ತಿದ್ದ ಚಾಲಕನ ಮೇಲೆ ಹಲ್ಲೆ ನಡೆಸಿದರು ಕಲ್ಲು ತೂರಾಟ ನಡೆಸಿದರು. ಇದರಿಂದ ರೊಚ್ಚಿಗೆದ್ದ ಚಾಲಕ ಗುಂಪಿನಲ್ಲಿದ್ದ ಓರ್ವನ ಮೇಲೆ ಟ್ಯಾಂಕರ್ ಹರಿಸಿದ್ದಾನೆ ಎನ್ನಲಾಗಿದೆ. ದಾಳಿಯಿಂದ ತಪ್ಪಿಸಿಕೊಳ್ಳಲು ಮತ್ತು ತನ್ನ ಜೀವವನ್ನು ಉಳಿಸುವ ಪ್ರಯತ್ನದಲ್ಲಿ ಟ್ಯಾಂಕರ್ ಚಾಲಕ ವೇಗವನ್ನು ಹೆಚ್ಚಿಸಿದ್ದು, ಈ ಭಯಾನಕ ಘಟನೆಯ ವೀಡಿಯೊ ವೈರಲ್ ಆಗಿದೆ.

https://twitter.com/i/status/1810304797775692137

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read