BREAKING : ಬಾಂಬ್ ಇದೆ ಎಂದು ಆಟೋ ಸಮೇತ ಪೊಲೀಸ್ ಠಾಣೆಗೆ ಬಂದ ಚಾಲಕ…ಮುಂದಾಗಿದ್ದೇನು..?

ಬೆಂಗಳೂರು : ಆಟೋ ಚಾಲಕನೋರ್ವ ಬಾಂಬ್ ಇದೆ ಎಂದು ಆಟೋ ಸಮೇತ ಪೊಲೀಸ್ ಠಾಣೆಗೆ ಬಂದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಆಟೋ ಚಾಲಕನೋರ್ವ ಧಿಡೀರ್ ಅಂತ ಜಯನಗರ ಪೊಲೀಸ್ ಠಾಣೆಗೆ ಬಂದು ಆಟೋ ಬಿಟ್ಟು ಇದರಲ್ಲಿ ಬಾಂಬ್ ಇದೆ ಎಂದು ಹೇಳಿದ್ದಾನೆ.

ಘಟನೆ ಹಿನ್ನೆಲೆ

ಆಟೋದಲ್ಲಿ ಅಪರಿಚಿತ ವ್ಯಕ್ತಿಯೋರ್ವ 2 ಬ್ಯಾಗ್ ಬಿಟ್ಟು ಹೋಗಿದ್ದನು. ಇದನ್ನು ನೋಡಿದ ಆಟೋ ಚಾಲಕ ಆಟೋವನ್ನು ಸೀದಾ ಜಯನಗರ ಪೊಲೀಸ್ ಠಾಣೆಗೆ ತಿರುಗಿಸಿದ್ದಾನೆ. ಪೊಲೀಸರ ಬಳಿ ಆಟೋದಲ್ಲಿ ಬಾಂಬ್ ಇದೆ ಎಂದು ಹೇಳಿದ್ದಾನೆ. ಕೂಡಲೇ ಪೊಲೀಸರು ಆಟೋವನ್ನು ಬಿಎಸ್ ಎನ್ ಎನ್ ಎಲ್ ಎಕ್ಸ ಚೇಂಚ್ ಬಳಿಯಿರುವ ಆಟದ ಮೈದಾನಕ್ಕ ಕೊಂಡೊಯ್ದಿದ್ದಾರೆ. ಆಟೋದ ಹಿಂದೆ 2 ಬ್ಯಾಗ್ ಗಳು ಪತ್ತೆಯಾಗಿದೆ. ಕೂಡಲೇ ಸ್ಥಳಕ್ಕೆ ಬಂದ ಬಾಂಬ್ ಸ್ಕ್ವಾಡ್ ಪರಿಶೀಲನೆ ನಡೆಸಿದೆ. ಆದರೆ ಬ್ಯಾಗ್ ನಲ್ಲಿ ಯಾವುದೇ ಸ್ಪೋಟಕ ವಸ್ತುಗಳು ಪತ್ತೆಯಾಗಿಲ್ಲ. ಬದಲಿಗೆ ಡ್ರಿಲ್ಲಿಂಗ್ ಮೆಷಿನ್ ನ ಬಿಡಿಭಾಗಗಳು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read