ನಟಿ ಪ್ರಿಯಾಂಕಾ ಚೋಪ್ರಾ ಅವರ ಸೋದರ ಸಂಬಂಧಿ ನಟಿ ಮನ್ನಾರ ಚೋಪ್ರಾ ಅವರನ್ನು ನಿರ್ದೇಶಕರೊಬ್ಬರು ಕ್ಯಾಮೆರಾ ಮುಂದೆಯೇ ಚುಂಬಿಸಿದ್ದಾರೆ. ವಿಡಿಯೊ ವೈರಲ್ ಆಗುತ್ತಿದ್ದಂತೆ ನಿರ್ದೇಶಕನಿಗೆ ಹಲವರು ತರಾಟೆ ತೆಗೆದುಕೊಂಡಿದ್ದಾರೆ.
ನಿರ್ದೇಶಕ ಎ.ಎಸ್.ರವಿಕುಮಾರ್ ಚೌಧರಿ ಅವರು ಮನ್ನಾರಾ ಅವರ ಕೆನ್ನೆಗೆ ಚುಂಬಿಸುತ್ತಿರುವ ವೀಡಿಯೊ ಆನ್ ಲೈನ್ ನಲ್ಲಿ ಹರಿದಾಡಿದೆ.
ಕೆಲವು ತಿಂಗಳುಗಳ ಹಿಂದೆ ಓಂ ರೌತ್ ಕೃತಿ ಸನೋನ್ ಅವರನ್ನು ಚುಂಬಿಸಿದ ಬಗ್ಗೆ ಅಂತರ್ಜಾಲದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಮನ್ನಾರಾ ಚೋಪ್ರಾ ಗೆ ನಿರ್ದೇಶಕ ಎ.ಎಸ್.ರವಿಕುಮಾರ್ ಚೌಧರಿ ಪಬ್ಲಿಕ್ ನಲ್ಲೇ ಕಿಸ್ ಮಾಡಿದ್ದಾರೆ.
ಈ ವಿಡಿಯೊ ಭಾರಿ ವೈರಲ್ ಆಗಿದ್ದು, ʻʻಪಾಪ ನಟಿಗೆ ಎಷ್ಟು ಮುಜುಗರವಾಯ್ತೋʼʼ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. “ಏನು ತೆವಲು ಇದು?ʼʼಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ. ವೈರಲ್ ವಿಡಿಯೊಗೆ ಮನ್ನಾರಾ ಇನ್ನೂ ಪ್ರತಿಕ್ರಿಯಿಸಿಲ್ಲ.ಪ್ರಿಯಾಂಕಾ ಚೋಪ್ರಾ ಅವರ ಸೋದರಸಂಬಂಧಿಯೂ ಆಗಿರುವ ಮನ್ನಾರಾ, ಬಾಲಿವುಡ್ ನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.
https://twitter.com/ManobalaV/status/1696195799502438819?ref_src=twsrc%5Etfw%7Ctwcamp%5Etweetembed%7Ctwterm%5E1696195799502438819%7Ctwgr%5E30d31f5d48d5097967ec62b3f122228d57f2f532%7Ctwcon%5Es1_&ref_url=https%3A%2F%2Fvistaranews.com%2Fviral-news%2Fdirector-ravi-kumar-kissing-priyanka-chopra-cousin-mannara%2F439983.html