ಭಾರೀ ವಿರೋಧದ ಬಳಿಕ ಭಜರಂಗಿ ಡೈಲಾಗ್ ಬದಲಾಯಿಸಿದ ʼಆದಿಪುರುಷ್ʼ ಚಿತ್ರತಂಡ

ವಿವಾದಾತ್ಮಕ ಸಂಭಾಷಣೆಗಳಿಂದ ಟೀಕೆಗೆ ಗುರಿಯಾಗಿರುವ ಪ್ರಭಾಸ್ ಮತ್ತು ಕೃತಿ ಸನನ್ ಅಭಿನಯದ ʼಆದಿಪುರುಷ್ʼ ಚಿತ್ರಕ್ಕೆ ಭಾರೀ ಹಿನ್ನಡೆಯಾಗಿದ್ದು, ಚಿತ್ರತಂಡವು ಚರ್ಚೆಗೆ ಸಿಲುಕಿರುವ ಸಂಭಾಷಣೆಗಳಿಗೆ ಕತ್ತರಿ ಹಾಕಿದೆ. ಆರಂಭದಲ್ಲಿ ಚಿತ್ರದಲ್ಲಿನ ಸಂಭಾಷಣೆಯನ್ನು ಸಮರ್ಥಿಸಿಕೊಂಡ ತಂಡ ಇದೀಗ ಟೀಕೆಗೆ ಗುರಿಯಾಗಿರುವ ಸಂಭಾಷಣೆಗಳನ್ನು ಬದಲಾಯಿಸಿದೆ.

ಭಗವಾನ್ ಹನುಮಾನ್ ಪಾತ್ರಧಾರಿಯ ಸಂಭಾಷಣೆಯ ಸಾಲುಗಳನ್ನು ನವೀಕರಿಸುವ ಭರವಸೆ ನೀಡಿದ ಬಳಿಕ ಡೈಲಾಗ್ ಗಳನ್ನು ಬದಲಿಸಿದೆ.

ಲಂಕಾ ದಹನ ದೃಶ್ಯದಲ್ಲಿ ಭಜರಂಗಿ “ಕಪ್ಡಾ ತೇರೆ ಬಾಪ್ ಕಾ, ತೇಲ್ ತೇರೆ ಬಾಪ್ ಕಾ, ಆಗ್ ಭಿ ತೇರೆ ಬಾಪ್ ಕಿ, ಔರ್ ಜಲೇಗಿ ಭಿ ತೇರೆ ಬಾಪ್ ಕಿ.” ಎಂದು ಹೇಳಿರುವ ಸಂಭಾಷಣೆಯಲ್ಲಿ ಬಾಪ್ ಬದಲಾಗಿ ಲಂಕಾ ಎಂದು ಬದಲಾಯಿಸಲಾಗಿದೆ. ವೀಕ್ಷಕರೊಬ್ಬರು ಬದಲಾದ ಸಂಭಾಷಣೆಯ ದೃಶ್ಯವನ್ನು ಟ್ವಿಟರ್‌ ನಲ್ಲಿ ಹಂಚಿಕೊಂಡಿದ್ದಾರೆ.

ಓಂ ರಾವುತ್ ನಿರ್ದೇಶನದ ʼಆದಿಪುರುಷ್ʼ ಚಿತ್ರದಲ್ಲಿ ಪ್ರಭಾಸ್, ಕೃತಿ ಸನನ್, ಸೈಫ್ ಅಲಿ ಖಾನ್, ಸನ್ನಿ ಸಿಂಗ್ ಮತ್ತು ದೇವದತ್ತ ನಾಗೆ ನಟಿಸಿದ್ದಾರೆ. ಇದು ಕಳೆದ ವಾರ ಜೂನ್ 16 ರಂದು ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಯಿತು.

ಆದಿಪುರುಷ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 140 ಕೋಟಿ ರೂ. ಗಳಿಸಿದೆ. ಆದರೆ ಭಾರೀ ಟೀಕೆ ಮತ್ತು ವಿವಾದದ ಬಳಿಕ ಗಳಿಕೆ ಇಳಿಕೆ ಕಂಡಿದೆ.

https://twitter.com/Bharatojha03/status/1671416625692827648?ref_src=twsrc%5Etfw%7Ctwcamp%5Etweetembed%7Ctwterm%5E1671416625692827648%7Ctwgr%5Ea1ff6a3b8ed5b35f8436ba3d34c86eece89a32f4%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fetvbharatenglish-epaper-dhd10d51c9d4a54e28a7ae1d122807a029%2Fadipurushmakersalterbajrangscontroversialdialoguewatchrevisedversion-newsid-n511479994

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read