ನಿಮ್ಮ ʼವ್ಯಕ್ತಿತ್ವʼಕ್ಕೆ ಮೆರುಗು ನೀಡುತ್ತೆ ನೀವು ಧರಿಸುವ ಉಡುಗೆ

ಊಟ ತನ್ನಿಚ್ಛೆ ನೋಟ ಪರರಿಚ್ಛೆ ಎನ್ನುವ ಗಾದೆ ಮಾತಿನಂತೆ ಆಹಾರವನ್ನು ಸೇವಿಸುವುದು ಅವರವರ ಇಷ್ಟಕ್ಕೆ ಅನುಸಾರವಾಗಿರುತ್ತದೆ. ಆದರೆ, ಬಟ್ಟೆಗಳನ್ನು ಧರಿಸುವುದು ಇತರರನ್ನು ಮೆಚ್ಚಿಸಲು. ಇದೆಲ್ಲಾ ಹಳೆ ಮಾತಾಯ್ತು, ತಮಗೆ ಇಷ್ಟವಾದ ಉಡುಗೆ ತೊಡುವುದು ಈಗಿನ ಟ್ರೆಂಡ್.

ಧರಿಸುವ ಬಟ್ಟೆಗಳು ಸುಂದರವಾಗಿ ಚೊಕ್ಕಟವಾಗಿರಬೇಕು. ಹಿತಮಿತವಾದ ಬಟ್ಟೆಗಳನ್ನು ಧರಿಸುವುದು ಸೌಂದರ್ಯದ ಲಕ್ಷಣಗಳಲ್ಲೊಂದು ಎನ್ನಲಾಗುತ್ತದೆ.

ಸೌಂದರ್ಯದ ಲಕ್ಷಣಗಳೆಂದು ಹಿತವಾದ ಉಡುಪು, ಮಿತವಾದ ಆಭರಣ, ಮಿತವಾದ ಮಾತು ಹಾಗೂ ವಿಶ್ವಾಸಪೂರ್ವಕವಾದ ನಡವಳಿಕೆ ಮೊದಲಾದವುಗಳನ್ನು ಪರಿಗಣಿಸಲಾಗುತ್ತದೆ.

ಕೆಲವು ಗಣ್ಯರು ಒಂದೇ ರೀತಿಯ ಡ್ರೆಸ್ ಮೂಲಕ ಗಮನ ಸೆಳೆಯುವುದನ್ನು ನೀವು ಗಮನಿಸಿರಬಹುದು. ಆ ವ್ಯಕ್ತಿಯನ್ನು ನೆನಪಿಸಿಕೊಂಡ ಕೂಡಲೇ ಅವರ ಡ್ರೆಸ್ ಕೂಡ ನೆನಪಿಗೆ ಬರುತ್ತದೆ. ಅದು ಅವರ ವ್ಯಕ್ತಿತ್ವವನ್ನೂ ಬಿಂಬಿಸುತ್ತದೆ.

ತಮ್ಮ ದೇಹದ ಆಕಾರ ಮತ್ತು ಬಣ್ಣಕ್ಕೆ ತಕ್ಕಂತೆ ಬಟ್ಟೆಗಳನ್ನು ಧರಿಸಿದಾಗ, ವ್ಯಕ್ತಿತ್ವಕ್ಕೆ ಮೆರುಗು ನೀಡುತ್ತದೆ. ಉತ್ತಮವಾದ ಉಡುಗೆಗಳು ಕೂಡ ನಿಮ್ಮನ್ನು ಮೆಚ್ಚುವಂತೆ ಮಾಡುತ್ತವೆ. ಬಣ್ಣದ ಉಡುಪುಗಳು, ತಿಳಿ ಬಣ್ಣದ ಬಟ್ಟೆಗಳು ಕೆಲವರಿಗೆ ಹೆಚ್ಚು ಆಕರ್ಷಕವಾಗಿ ಕಾಣುತ್ತವೆ.

ಯಾವುದೇ ಉಡುಪುಗಳಿರಲಿ, ಸ್ವಚ್ಛವಾಗಿರಬೇಕು. ಬಣ್ಣಗಳು ಮನಸ್ಸಿಗೆ ಹಿತವೆನಿಸುವಂತಿರಬೇಕು. ದೇಹದ ಆಕಾರಕ್ಕೆ ಅನುಗುಣವಾಗಿ ಬಟ್ಟೆ ಧರಿಸುವುದರಿಂದ ಅದು ನಿಮಗೆ ಮತ್ತು ನೋಡುಗರಿಗೆ ಹಿತವಾಗುತ್ತದೆ. ನಿಮ್ಮ ವ್ಯಕ್ತಿತ್ವಕ್ಕೆ ಮೆರುಗು ನೀಡುತ್ತೆ ನೀವು ಧರಿಸುವ ಉಡುಪು ಎಂಬುದು ನಿಮಗೆ ತಿಳಿದಿರಲಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read