ಮಹಿಳೆಗೆ ಡಿಕ್ಕಿ ಹೊಡೆದು ಸ್ವಲ್ಪ ದೂರ ಎಳೆದೊಯ್ದ ಕಾರು ಚಾಲಕ : ಭೀಕರ ಅಪಘಾತದ ದೃಶ್ಯ ಸೆರೆ..!
ನವದೆಹಲಿ: ದೆಹಲಿಯ ನಂದ್ ನಗರಿ ಪ್ರದೇಶದಲ್ಲಿ ಮಂಗಳವಾರ ಮಹಿಳೆಯೊಬ್ಬರನ್ನು ಕಾರು ಡಿಕ್ಕಿ ಹೊಡೆದು ಎಳೆದೊಯ್ದ ಘಟನೆ ನಡೆದಿದೆ.
ಇಡೀ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳೆದ ಮಂಗಳವಾರ ಬೆಳಿಗ್ಗೆ 11.37 ಕ್ಕೆ ಈ ಘಟನೆ ನಡೆದಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಪ್ರಯಾಣಿಸುತ್ತಿದ್ದ ಬೈಕ್ ಒಂದಕ್ಕೆ ಕಾರು ಡಿಕ್ಕಿ ಹೊಡೆದಿದ್ದು, ಕೆಳಗೆ ಬಿದ್ದ ಮಹಿಳೆಯನ್ನು ಕಾರು ಚಾಲಕ ಸ್ವಲ್ಪ ದೂರದವರೆಗೆ ಎಳೆದೊಯ್ದಿದ್ದಾನೆ.ಆರೋಪಿಯನ್ನು ಸನ್ನಿ ರಾವಲ್ ಎಂದು ಗುರುತಿಸಲಾಗಿದ್ದು, ಅಪರಾಧದ ಸ್ಥಳದಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದನು ಆದರೆ ನಂತರ ಅವನನ್ನು ಬಂಧಿಸಲಾಯಿತು.ಐಪಿಸಿ ಸೆಕ್ಷನ್ 279, 337 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
https://twitter.com/i/status/1778314325679054892