ಮದುವೆ ಮಂಟಪದಲ್ಲಿ ಮುಖ ಮೂತಿ ನೋಡದೆ ವರನನ್ನು ಚಚ್ಚಿದ ವಧು; ಆಘಾತಕಾರಿ ವಿಡಿಯೋ ವೈರಲ್…!

ಮದುವೆ ಸಂದರ್ಭದಲ್ಲಿನ ಹಲವು ತಮಾಷೆ ಘಟನೆಗಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಅದೇ ರೀತಿ ಆ ಸಂದರ್ಭದಲ್ಲಿ ನಡೆದ ಅನಾಹುತಕಾರಿ ಘಟನೆಗಳ ವಿಡಿಯೋ ಸಹ ಹರಿದಾಡುತ್ತವೆ. ಇದೀಗ ಅಂತಹ ಆಘಾತಕಾರಿ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಯಾವುದೋ ಕಾರಣಕ್ಕೆ ವಧು ಮತ್ತು ವರ ಕಿತ್ತಾಡಲು ಆರಂಭಿಸುತ್ತಾರೆ. ಅಕ್ಕಪಕ್ಕದಲ್ಲಿದ್ದವರು ಬಿಡಿಸಿಕೊಳ್ಳಲು ಪ್ರಯತ್ನಿಸಿದರೂ ಸಹ ಯಾವುದೇ ಉಪಯೋಗವಾಗುವುದಿಲ್ಲ. ವಧು ಮತ್ತು ವರ ಪರಸ್ಪರ ಹೊಡೆದುಕೊಳ್ಳಲು ಶುರು ಮಾಡುತ್ತಾರೆ.

ಒಂದು ಹಂತದಲ್ಲಿ ವಧುವಿನ ಕೈಯೇ ಮೇಲಾಗಿದ್ದು, ಆಕೆ ವರನನ್ನು ಮದುವೆ ಮಂಟಪದ ಕುರ್ಚಿಯ ಮೇಲೆ ತಳ್ಳಿ ಮುಖ ಮೂತಿ ನೋಡದೆ ಚಚ್ಚಲು ಆರಂಭಿಸಿದ್ದಾಳೆ. ಆ ಬಳಿಕ ಮದುವೆ ನಡೆಯಿತೋ ಇಲ್ಲವೋ ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಜಗಳದ ವಿಡಿಯೋವನ್ನು ವೀಕ್ಷಿಸಿದ ನೆಟ್ಟಿಗರು ಆಘಾತ ವ್ಯಕ್ತಪಡಿಸಿದ್ದು ಒಂದೊಮ್ಮೆ ಇವರುಗಳು ಮದುವೆಯಾದರೆ ಮುಂದೆ ಸುಖ ಸಂಸಾರ ನಡೆಸಿಯಾರೆ ಎಂದು ಪ್ರಶ್ನಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read