ಏನಾದರೂ ಬಿಸಿ ಬಿಸಿ ತಿಂಡಿ ಸವಿಯಬೇಕು ಎಂದು ಅನಿಸಿದರೆ ಹೊಸ ರುಚಿಯ ಡ್ರೈಫ್ರೂಟ್ಸ್ ಕಚೋರಿ ಟ್ರೈ ಮಾಡಿ. ಇದನ್ನು ತಯಾರಿಸುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು
ಮೈದಾ ಹಿಟ್ಟು – 2 ಕಪ್
 ಚಿರೋಟಿ ರವೆ – 1 ಕಪ್
 ಉಪ್ಪು- 1 ಚಿಟಿಕೆ
 ಗೋಡಂಬಿ – 10
 ಬಾದಾಮಿ – 8
 ಪಿಸ್ತಾ – 8
 ದ್ರಾಕ್ಷಿ – 10
 ಗಸಗಸೆ ಪುಡಿ – 3 ಚಮಚ
 ಸೋಂಪು ಕಾಳು – 3 ಚಮಚ
 ಒಣ ಕೊಬ್ಬರಿ ತುರಿ – ಅರ್ಧ ಕಪ್
 ಸಕ್ಕರೆ ಪುಡಿ – 1 ಕಪ್
 ಎಳ್ಳಿನ ಪುಡಿ – 3 ಚಮಚ
 ಏಲಕ್ಕಿ ಪುಡಿ – ಅರ್ಧ ಚಮಚ
 ಹುರಿಗಡಲೆ ಪುಡಿ – ಅರ್ಧ ಕಪ್
ಮಾಡುವ ವಿಧಾನ
ಮೈದಾ ಹಿಟ್ಟಿಗೆ ಉಪ್ಪು, ಚಿರೋಟಿ ರವೆ ಮತ್ತು ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಅರ್ಧ ಗಂಟೆ ನೆನೆಯಲು ಬಿಡಿ.
ಗೋಡಂಬಿ, ಬಾದಾಮ್, ಪಿಸ್ತಾ, ಸೋಂಪು ಕಾಳುಗಳನ್ನು ಸೇರಿಸಿ ತರಿತರಿಯಾಗಿ ಪುಡಿ ಮಾಡಿ.
ದ್ರಾಕ್ಷಿ, ಗಸಗಸೆ ಪುಡಿ, ಒಣ ಕೊಬ್ಬರಿ ತುರಿ, ಸಕ್ಕರೆ ಪುಡಿ, ಎಳ್ಳಿನ ಪುಡಿ, ಏಲಕ್ಕಿ ಪುಡಿಯನ್ನು ಹುರಿಗಡಲೆ ಪುಡಿಗೆ ಸೇರಿಸಿ.
ಇದಕ್ಕೆ ಗೋಡಂಬಿ, ಬಾದಾಮ್ ಮಿಶ್ರಣ ಹಾಕಿ. ಕಲಸಿದ ಹಿಟ್ಟಿನ ಮಿಶ್ರಣದಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಬಟ್ಟಲಾಕಾರದಲ್ಲಿ ತಟ್ಟಿ ಎರಡು ಚಮಚದಷ್ಟು ಹೂರಣ ತುಂಬಿಸಿ ಅಂಚುಗಳನ್ನು ಅಂಟಿಸಿ ಮೆಲುವಾಗಿ ಲಟ್ಟಿಸಿ. ಕಾದ ಎಣ್ಣೆಯಲ್ಲಿ ಕರೆದರೆ ಡ್ರೈಫ್ರೂಟ್ಸ್ ಕಚೋರಿ ರೆಡಿ ಟು ಈಟ್.

 
			 
		 
		 
		 
		 Loading ...
 Loading ... 
		 
		 
		