ಬೇಸಿಗೆಯಲ್ಲಿ ಬೆಸ್ಟ್ ʼಸೌತೆಕಾಯಿʼ ಜ್ಯೂಸ್;‌ ತಂಪಾಗಿರಲು ತಪ್ಪದೇ ಸೇವಿಸಿ

ಬಿಸಿಲಿನ ಬೇಗೆಯೇ ಅಂತದ್ದು. ಎಷ್ಟು ನೀರು ಕುಡಿದರೂ ಸಾಲದು. ತಂಪಾದ ಪಾನೀಯಗಳೂ ಕ್ಷಣಮಾತ್ರಕ್ಕೆ ಬಾಯಾರಿಕೆಯನ್ನು ತಣಿಸುತ್ತವೆ. ಆದರೆ ಜಾಸ್ತಿ ಹೊತ್ತು ದಾಹವನ್ನು ತಣಿಸುವುದಿಲ್ಲ.

ಅದಕ್ಕೆ ಮನೆಯಲ್ಲಿಯೇ ಸುಲಭವಾಗಿ ಹಣ್ಣಿನ ರಸಗಳನ್ನು ತಯಾರಿಸಿಕೊಂಡರೆ ದೇಹಕ್ಕೂ ಆಹ್ಲಾದ. ಆರೋಗ್ಯಕ್ಕೂ ಉತ್ತಮ. ಹಾಗಾದರೆ ತಂಪು ತಂಪಾದ ಸೌತೆಕಾಯಿ ಜ್ಯೂಸ್ ಮಾಡುವುದು ಹೇಗೆ ಅಂತ ತಿಳಿಯೋಣ.

ಬೇಕಾಗುವ ಸಾಮಾಗ್ರಿಗಳು

ಸೌತೆಕಾಯಿ 2
ನೀರು 2 ಕಪ್
ಪುದೀನಾ ಸ್ವಲ್ಪ
ನಿಂಬೆರಸ 1 ಟೀ ಚಮಚ
ಸಕ್ಕರೆ 3 ಟೀ ಚಮಚ
ಉಪ್ಪು 1/4 ಟೀ ಚಮಚ
ಕಾಳು ಮೆಣಸಿನಪುಡಿ 1/4 ಟೀ ಚಮಚ
ಐಸ್‌ ಕ್ಯೂಬ್ 2

ಮಾಡುವ ವಿಧಾನ

ಮೊದಲು ಸೌತೆಕಾಯಿಯ ಸಿಪ್ಪೆಯನ್ನು ತೆಗೆದು ಚಿಕ್ಕದಾಗಿ ಕತ್ತರಿಸಿ ಮಿಕ್ಸಿ ಜಾರಿಗೆ ಹಾಕಿಕೊಳ್ಳಬೇಕು.

ಅದರ ಜೊತೆಗೆ ಸಕ್ಕರೆ, ಪುದೀನಾ, ಕಾಳುಮೆಣಸಿನಪುಡಿ, ಉಪ್ಪು ಮತ್ತು ನಿಂಬೆರಸವನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು.

ಈ ಮಿಶ್ರಣಕ್ಕೆ ನೀರನ್ನು ಸೇರಿಸಿ ಮತ್ತೊಂದು ಸುತ್ತು ರುಬ್ಬಿಕೊಳ್ಳಬೇಕು. ನಂತರ ಅದಕ್ಕೆ ಐಸ್‌ ಕ್ಯೂಬ್ ಅನ್ನು ಹಾಕಿದರೆ ರುಚಿಕರವಾದ ಆರೋಗ್ಯಕರವಾದ ಸೌತೆಕಾಯಿ ಜ್ಯೂಸ್ ಸವಿಯಲು ಸಿದ್ಧ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read