ಹುಲಿಗಳು ಮತ್ತು ಸಿಂಹಗಳಂತಹ ವನ್ಯ ಮೃಗಗಳು ನಾಯಿಯಂಥ ಸಾಕು ಪ್ರಾಣಿಗಳಂತೆಯೇ ಆಟವಾಡುತ್ತದೆ ಎಂದು ಕೆಲವೊಮ್ಮೆ ಊಹಿಸಲು ಕೂಡ ಸಾಧ್ಯವಿಲ್ಲ. ಆದರೆ, ಈ ಅಸಾಧ್ಯ ದೃಶ್ಯವನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ ನಾಯಿಯು ಹುಲಿಯನ್ನು ಕಚ್ಚುವುದನ್ನು ನೋಡಬಹುದು. ಆಗ ಸಿಂಹವು ಆಟವಾಡುತ್ತಾ ಕಚ್ಚುವುದನ್ನು ತಪ್ಪಿಸಿಕೊಳ್ಳುತ್ತದೆ. ನಂತರ ಚಿಕ್ಕ ಮಕ್ಕಳಂತೆ ಇವುಗಳ ಆಟವಾಡುತ್ತವೆ. ಅದೇ ಇನ್ನೊಂದೆಡೆ, ಸಿಂಹವು ಹುಲಿಯ ಮೇಲೆ ತಮಾಷೆಯಾಗಿ ಆಕ್ರಮಣ ಮಾಡಲು ಪ್ರಯತ್ನಿಸುತ್ತದೆ. ಈ ಮೂರೂ ಪ್ರಾಣಿಗಳ ಸೇರಿ ಆಡುವ 31 ಸೆಕೆಂಡುಗಳ ವಿಡಿಯೋ ಅಚ್ಚರಿ ತರುವಂತಿದೆ.
ಈ ಗೊಂದಲದ ವಿಡಿಯೋವನ್ನು ಪರೀಖ್ ಜೈನ್ (@pareekhjain) ಎಂಬ ಟ್ವಿಟರ್ ಬಳಕೆದಾರರು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ. “ಹುಲಿ, ಸಿಂಹ ಮತ್ತು ನಾಯಿಯ ನಡುವೆ ಕಾಳಗ, ನಿಮ್ಮ ಹುಚ್ಚು ಕಲ್ಪನೆಯನ್ನು ಬಿಟ್ಟು ಇದನ್ನು ನೋಡಿ” ಎಂದು ಪರೀಖ್ ಅವರು ಬರೆದಿದ್ದಾರೆ. ಈ ಘಟನೆ ಸೈಬೀರಿಯನ್ ಮೃಗಾಲಯದಲ್ಲಿ ನಡೆದಿದ್ದು ಎನ್ನಲಾಗಿದೆ.
https://twitter.com/pareekhjain/status/1617779226605932546?ref_src=twsrc%5Etfw%7Ctwcamp%5Etweetembed%7Ctwterm%5E1617779226605932546%7Ctwgr%5Edcd4aff6cb7232970e4f70afb55b3019c3b613c9%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-globally%2Ftiger-lion-and-a-dog-play-together-8404508%2F