ಮಹಿಳೆಯರ ಮೂಗಿನ ಅಂದ ಹೆಚ್ಚಿಸುವ ಚೆಂದದ ಮೂಗುತಿ

ಮೂಗುತಿ, ನತ್ತು, ಬುಲಾಕು, ಹೀಗೆ ನಾನಾ ಹೆಸರಿಂದ ಕರೆಸಿಕೊಳ್ಳುವ ಮೂಗಿನ ಆಭರಣಕ್ಕೆ ಮನಸೋಲದ ಮಹಿಳೆಯರಿಲ್ಲ. ಮೂಗುತಿ ಧರಿಸುವುದು ನಮ್ಮ ಸಂಪ್ರದಾಯವಾದರೂ ಈಗಿನ ಫ್ಯಾಷನಬಲ್ ಜೀನ್ಸ್ ಉಡುಗೆಗೆ ಮೂಗುತಿ ಒಪ್ಪುವುದಿಲ್ಲ ಎಂದು ಮೂಗು ಮುರಿಯುವ ಯುವತಿಯರೂ ಇದ್ದಾರೆ. ಆದರೆ ಸಾಂಪ್ರದಾಯಿಕ ಉಡುಗೆಯಲ್ಲಿ ಮೂಗುತಿ ಇಲ್ಲದೆ ಮಾಡಿಕೊಂಡ ಅಲಂಕಾರ ಅಪೂರ್ಣ.

ಮೂಗಿನ ಆಕಾರಕ್ಕೆ ತಕ್ಕ ಮೂಗುತಿ ಧರಿಸಿದರೆ ಸುಂದರ. ಚಿಕ್ಕ ಚಿಕ್ಕ ಒಂದೇ ಒಂದು ಹರಳಿನ ಮೂಗುತಿ, ನಕ್ಷತ್ರದಾಕಾರ, ಕಮಲಾಕಾರದ ಹೀಗೆ ಹತ್ತು ಹಲವು ಬಗೆಯಲ್ಲಿ ಮೂಗುತಿ ಲಭ್ಯ, ಹಾಗೆಯೇ ರಿಂಗ್ ತರಹದ ಮೂಗುತಿ ಧರಿಸುವುದು ಕೆಲವರಿಗೆ ಅಚ್ಚು ಮೆಚ್ಚು.

ಹಿಂದಿನ ಕಾಲದಲ್ಲಿ ಮಹಿಳೆಯರ ಮೂಗಿಗಿಂತ ಅವರು ಧರಿಸುತ್ತಿದ್ದ ಮೂಗುತಿಯ ಗಾತ್ರವೇ ದೊಡ್ಡದಾಗಿರುತ್ತಿತ್ತು. ಕಾಲ ಕಳೆದಂತೆ ಮಹಿಳೆಯರು ಚಿಕ್ಕ ಮೂಗುತಿ ಹಾಕಲು ಶುರು ಮಾಡಿದ್ದರು. ಇದೀಗ ಹಳೆಯ ದೊಡ್ಡ ದೊಡ್ಡ ಮೂಗುತಿಗಳೇ ಟ್ರೆಂಡ್ ಆಗುತ್ತಿವೆ.

ಇತ್ತೀಚಿಗೆ ಮೂಗುತಿಗೂ ಫ್ಯಾಷನ್ ಮೆರುಗು ಬಂದಿದೆ, ಮೂಗುತಿ ಧರಿಸುವುದು ಓಲ್ಡ್ ಫ್ಯಾಷನ್ ಎನ್ನುತಿದ್ದ ಹುಡುಗಿಯರೂ ಈಗ ಫ್ಯಾಷನಬಲ್ ಮೂಗುತಿ ಧರಿಸುವತ್ತ ಆಕರ್ಷಿತರಾಗುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read